ಉಕ್ರೇನ್ ಸಂಘರ್ಷ ಪರಿಹಾರ ಕುರಿತು ಬೈಡನ್-ಮೋದಿ ಚರ್ಚೆ: ಭಾರತದ ಶಾಂತಿ ಕ್ರಮಕ್ಕೆ ಅಮೆರಿಕ ಅಧ್ಯಕ್ಷರ ಶ್ಲಾಘನೆ

ಯುಎಸ್ ಅಧ್ಯಕ್ಷ ಜೋ ಬೈಡನ್ ಅವರು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಉಕ್ರೇನ್ ಗೆ ಶಾಂತಿ ಸಂದೇಶ ಮತ್ತು ನಡೆಯುತ್ತಿರುವ ಮಾನವೀಯ ಬೆಂಬಲವನ್ನು ಶ್ಲಾಘಿಸಿದ್ದಾರೆ. ಆಗಸ್ಟ್ 23 ರಂದು ಮೋದಿಯವರ ಕೈವ್ ಭೇಟಿಯನ್ನು ಅನೇಕರು ರಾಜತಾಂತ್ರಿಕ ಸಮತೋಲನವಾಗಿ ನೋಡಿದ್ದಾರೆ.
ವಿಶೇಷವಾಗಿ ಹಿಂದಿನ ತಿಂಗಳು ಅವರ ರಷ್ಯಾ ಪ್ರವಾಸವು ಬೈಡನ್ ಆಡಳಿತ ಮತ್ತು ಕೆಲವು ಪಾಶ್ಚಿಮಾತ್ಯ ರಾಜಧಾನಿಗಳಿಂದ ಟೀಕೆಗೆ ಗುರಿಯಾಗಿತ್ತು.
ತಮ್ಮ ಭೇಟಿಯ ಸಮಯದಲ್ಲಿ ಮೋದಿ ಅವರು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರಿಗೆ ಸಂಘರ್ಷವನ್ನು ಕೊನೆಗೊಳಿಸಲು ಉಕ್ರೇನ್ ಮತ್ತು ರಷ್ಯಾ ಒಗ್ಗೂಡಬೇಕು ಎಂದು ತಿಳಿಸಿದರು. ಅಲ್ಲದೇ ಶಾಂತಿಯನ್ನು ಸಾಧಿಸುವಲ್ಲಿ “ಸಕ್ರಿಯ ಪಾತ್ರ” ವಹಿಸಲು ಭಾರತ ಸಿದ್ಧವಾಗಿದೆ ಎಂದು ಹೇಳಿದರು. ‘ಎಕ್ಸ್’ ಪೋಸ್ಟ್ ನಲ್ಲಿ ಬೈಡನ್, “ಪೋಲೆಂಡ್ ಮತ್ತು ಉಕ್ರೇನ್ ಗೆ ಅವರ ಇತ್ತೀಚಿನ ಪ್ರವಾಸದ ಬಗ್ಗೆ ಚರ್ಚಿಸಲು ನಾನು ಪ್ರಧಾನಿ ಮೋದಿಯವರೊಂದಿಗೆ ಮಾತನಾಡಿದ್ದೇನೆ ಮತ್ತು ಶಾಂತಿಯ ಸಂದೇಶ ಮತ್ತು ಉಕ್ರೇನ್ಗೆ ನಡೆಯುತ್ತಿರುವ ಮಾನವೀಯ ಬೆಂಬಲಕ್ಕಾಗಿ ಅವರನ್ನು ಶ್ಲಾಘಿಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth