ಹೇಮಾ ಕಮಿಟಿ ವರದಿ ಬಗ್ಗೆ ಪ್ರಶ್ನೆ ಕೇಳಿದಾಗ ರೌದ್ರಾವತಾರ: ಪತ್ರಕರ್ತರ ಜತೆ ಸಚಿವ ಸುರೇಶ್ ಗೋಪಿ ಅನುಚಿತ ವರ್ತನೆ

ನಟ ಮತ್ತು ಕೇಂದ್ರ ಸಚಿವ ಸುರೇಶ್ ಗೋಪಿಯವರು ಮತ್ತೊಮ್ಮೆ ಮಾಧ್ಯಮದ ವಿರುದ್ಧ ಹರಿಹಾಯ್ದಿದ್ದಾರೆ. ಪತ್ರಕರ್ತರನ್ನು ತಳ್ಳಿದ್ದಲ್ಲದೇ ಮೈಕನ್ನು ದೂರ ತಳ್ಳಿದ್ದಾರೆ. ಹೇಮಾ ಕಮಿಟಿ ವರದಿಗೆ ಸಂಬಂಧಿಸಿದ ಪ್ರಶ್ನೆಗೆ ಅವರು ಈ ರೌದ್ರಾವತಾರ ತಾಳಿದ್ದಾರೆ. ಈ ಹಿಂದೆ ಮೀಡಿಯಾ ವನ್ ಪತ್ರಕರ್ತೆಯ ಜೊತೆ ಅನುಚಿತವಾಗಿ ವರ್ತಿಸಿ ಕೇಸು ಜಡಿಸಿಕೊಂಡಿದ್ದರು.
ಇದಕ್ಕಿಂತ ಮೊದಲು ಸುರೇಶ್ ಗೋಪಿ ಅವರ ಜೊತೆ ಹೇಮಾ ಸಮಿತಿಯ ವರದಿಯ ಬಗ್ಗೆ ಪ್ರಶ್ನಿಸಲಾಗಿತ್ತು. ದೊಡ್ಡದೊಂದು ವ್ಯವಸ್ಥೆಯನ್ನು ನಾಶ ಮಾಡಲು ಮಾಧ್ಯಮಗಳು ಪ್ರಯತ್ನಿಸುತ್ತಿವೆ. ನಿಮ್ಮದು ಹಣ ಮಾಡುವ ಉದ್ದೇಶ, ತೊಂದರೆ ಇಲ್ಲ ಎಂದವರು ಖಾರವಾಗಿ ಉತ್ತರಿಸಿದ್ದರು. ಅವರು ಅಮ್ಮ ಎಂಬ ಸಿನಿಮಾ ಸಂಘಟನೆಯ ಕುರಿತಂತೆ ಈ ಮಾತನ್ನು ಹೇಳಿದ್ದರು. ಅದನ್ನು ಈ ಪತ್ರಕರ್ತರು ಸೇರಿ ನಾಶ ಮಾಡ್ತಾ ಇದ್ದಾರೆ ಎಂಬಂತೆ ಅವರು ಹೇಳಿದ್ದರು.
ಆದರೆ ಸುರೇಶ್ ಗೋಪಿ ಅವರ ಮಾತನ್ನು ಅವರದೇ ಪಕ್ಷದ ಅಧ್ಯಕ್ಷ ಕೆ ಸುರೇಂದ್ರನ್ ವಿರೋಧಿಸಿದ್ದರು. ಅವರು ಪಕ್ಷದ ಧೋರಣೆಯನ್ನು ಪ್ರತಿನಿಧಿಸುತ್ತಿಲ್ಲ ಎಂದು ಹೇಳಿದ್ದರು. ಸಿಪಿಎಂ ಪಕ್ಷದ ಶಾಸಕ ಮುಕೇಶ್ ಅವರ ವಿರುದ್ಧ ನಟಿ ಹೊರಿಸಿದ ಆರೋಪದ ಹಿನ್ನೆಲೆಯಲ್ಲಿ ಸುರೇಶ್ ಗೋಪಿಯಲ್ಲಿ ಪ್ರಶ್ನೆ ಕೇಳಲಾಗಿತ್ತು. ಅವರು ರಾಜೀನಾಮೆ ನೀಡಬೇಕೇ ಎಂದು ಪ್ರಶ್ನಿಸಲಾಗಿತ್ತು ಅದಕ್ಕೆ ಸುರೇಶ್ ಗೋಪಿ ಸಿಟ್ಟಾಗಿದ್ದರು. ಆದರೆ ಬಿಜೆಪಿಯ ನಿಲುವು ಸುರೇಶ್ ಗೋಪಿಯದ್ದಲ್ಲ ಮತ್ತು ಆ ಶಾಸಕ ರಾಜೀನಾಮೆ ನೀಡಬೇಕು ಎಂಬುದು ಬಿಜೆಪಿಯ ಬಯಕೆಯಾಗಿದೆ ಎಂದು ಬಿಜೆಪಿ ಅಧ್ಯಕ್ಷರು ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth