ಗಡಿಯಲ್ಲಿ ಅನ್ನದಾತರ ಪ್ರತಿಭಟನೆ: 'ರೈತರೇ, "ನಿಮ್ಮ ಮಗಳು ನಿಮ್ಮೊಂದಿಗಿದ್ದಾಳೆ' ಎಂದ ವಿನೇಶ್ - Mahanayaka

ಗಡಿಯಲ್ಲಿ ಅನ್ನದಾತರ ಪ್ರತಿಭಟನೆ: ‘ರೈತರೇ, “ನಿಮ್ಮ ಮಗಳು ನಿಮ್ಮೊಂದಿಗಿದ್ದಾಳೆ’ ಎಂದ ವಿನೇಶ್

31/08/2024


Provided by

ಶಂಭು ಗಡಿಯಲ್ಲಿ ರೈತರ ಪ್ರತಿಭಟನೆ ನಡೆಯುತ್ತಿದ್ದು ಕುಸ್ತಿಪಟು ವಿನೇಶ್ ಫೋಗಟ್ ಬೆಂಬಲ ವ್ಯಕ್ತಪಡಿಸಿದ್ದು ಪ್ರತಿಭಟನೆಯಲ್ಲಿ ಭಾಗಿಯಾದರು. “ನಿಮ್ಮ ಮಗಳು ನಿಮ್ಮೊಂದಿಗಿದ್ದಾಳೆ” ಎಂದು ರೈತರಿಗೆ ಫೋಗಟ್ ಭರವಸೆ ನೀಡಿದ್ದಾರೆ. ಶಂಭು ಗಡಿಯಲ್ಲಿ ರೈತರ ಪ್ರತಿಭಟನೆಯು ಶನಿವಾರ 200ನೇ ದಿನಕ್ಕೆ ಕಾಲಿರಿಸಿದೆ.

ದೆಹಲಿಗೆ ತೆರಳಲು ಪೊಲೀಸರು ತಡೆದ ಬಳಿಕ ಫೆಬ್ರವರಿ 13ರಿಂದ ರೈತರು ಶಂಭು ಗಡಿಯಲ್ಲಿ ಠಿಕಾಣಿ ಹೂಡಿದ್ದಾರೆ. ಪ್ರತಿಭಟನಾಕಾರರು ಎಲ್ಲಾ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ ಜೊತೆಗೆ ಹಲವಾರು ಬೇಡಿಕೆಗಳನ್ನು ಸರ್ಕಾರದ ಮುಂದಿರಿಸಿದ್ದಾರೆ.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ವಿನೇಶ್ ಫೋಗಟ್, “ನಿಮ್ಮ ಆಂದೋಲನ ಇಂದಿಗೆ 200 ದಿನಗಳನ್ನು ಪೂರೈಸಿದೆ. ನಿಮ್ಮ ಹಕ್ಕು, ನ್ಯಾಯ ನಿಮಗೆ ಸಿಗಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ನಿಮ್ಮ ಮಗಳು ನಿಮ್ಮೊಂದಿಗಿದ್ದಾಳೆ. ನಾವೂ ಸಹ ಈ ದೇಶದ ಪ್ರಜೆಗಳು, ನಾವು ಪ್ರತಿ ಬಾರಿಯೂ ದನಿ ಎತ್ತಿದರೆ ಅದು ರಾಜಕೀಯವಲ್ಲ. ಸರ್ಕಾರ ಬೇಡಿಕೆಯನ್ನು ಕೇಳಬೇಕು” ಎಂದು ಹೇಳಿದರು.

ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಫೋಗಟ್, “ರೈತರ ಪ್ರತಿಭಟನೆ 200 ದಿನ ಪೂರೈಸಿದೆ. ಕಳೆದ ಬಾರಿ 13 ತಿಂಗಳ ಕಾಲ ಪ್ರತಿಭಟನೆ ಮುಂದುವರಿದಿತ್ತು. ಸರ್ಕಾರ ಬೇಡಿಕೆಗಳನ್ನು ಈಡೇರಿಸುವುದಾಗಿ ಹೇಳಿದ್ದರೂ ಇನ್ನೂ ಈಡೇರಿಸಿಲ್ಲ ಎಂಬ ಕಾರಣಕ್ಕೆ ರೈತರು ಇಲ್ಲಿಯೇ ಕುಳಿತಿದ್ದಾರೆ. ಇದು ಬಹಳ ಬೇಸರ ತಂದಿದೆ” ಎಂದರು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ