ಚಾರ್ಜ್ ಶೀಟ್ ಸಲ್ಲಿಸಿದ ಬೆನ್ನಲ್ಲೇ ರೇಣುಕಾಸ್ವಾಮಿ ಫೋಟೋ ಲೀಕ್: ಪ್ರಾಣ ಭಿಕ್ಷೆ ಬೇಡುತ್ತಿರುವ ರೇಣುಕಾಸ್ವಾಮಿ! - Mahanayaka

ಚಾರ್ಜ್ ಶೀಟ್ ಸಲ್ಲಿಸಿದ ಬೆನ್ನಲ್ಲೇ ರೇಣುಕಾಸ್ವಾಮಿ ಫೋಟೋ ಲೀಕ್: ಪ್ರಾಣ ಭಿಕ್ಷೆ ಬೇಡುತ್ತಿರುವ ರೇಣುಕಾಸ್ವಾಮಿ!

renukaswamy
05/09/2024


Provided by

ಬೆಂಗಳೂರು: ನಿನ್ನೆಯಷ್ಟೇ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಈ ನಡುವೆ ಕೊಲೆಯ ಹಂತದದಲ್ಲಿ ರೇಣುಕಾಸ್ವಾಮಿ ಅಂಗಲಾಚುತ್ತಿರುವ ದೃಶ್ಯವನ್ನು ಮಾಧ್ಯಮಗಳು ಪ್ರಸಾರ ಮಾಡಿವೆ.

ಚಾರ್ಜ್ ಶೀಟ್ ಸಲ್ಲಿಕೆ ಬೆನ್ನಲ್ಲೇ ರೇಣುಕಾಸ್ವಾಮಿಯ ಕೊನೆಯ ಕ್ಷಣಗಳ ಫೋಟೋಗಳು ಮಾಧ್ಯಮಗಳಿಗೆ ಲೀಕ್ ಆಗಿವೆ. ರೇಣುಕಾಸ್ವಾಮಿ ಪ್ರಾಣಭಿಕ್ಷೆ ಬೇಡಿರುವ ದೃಶ್ಯ ಎಂದು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ.

ಪಟ್ಟಣಗೆರೆ ಶೆಡ್ ನಲ್ಲಿ ಎರಡು ಲಾರಿಗಳ ಮುಂದೆ ರೇಣುಕಾಸ್ವಾಮಿ ಅರೆಬೆತ್ತಲಾಗಿ ಅಂಗಲಾಚುತ್ತಿರುವ ದೃಶ್ಯ ಫೋಟೋಗಳಲ್ಲಿ ಕಂಡು ಬರುತ್ತದೆ. ಆದ್ರೆ ನಟ ದರ್ಶನ್ ಹಲ್ಲೆ ನಡೆಸುತ್ತಿರುವ ದೃಶ್ಯ ಲಭ್ಯವಾಗಿಲ್ಲ ಎಂದು ಹೇಳಲಾಗಿದೆ. ಯಾರು ಹಲ್ಲೆ ನಡೆಸಿರೋದು ಅನ್ನೋ ವಿಚಾರ ತಿಳಿದು ಬಂದಿಲ್ಲ.

ರೇಣುಕಾಸ್ವಾಮಿ ತಂದೆ ಹೇಳಿದ್ದೇನು?

ಮಗನನ್ನು ಕಳೆದುಕೊಂಡಿದ್ದೇವೆ. ಅವನ ಸುದ್ದಿ ಕೇಳಿ ಕೇಳಿ ನಾವೂ ಜೀವಂತ ಹೆಣವಾಗಿದ್ದೇವೆ. ಏನು ಹೇಳ್ಬೇಕು ಗೊತ್ತಿಲ್ಲ. ಅಷ್ಟು ಜನರಲ್ಲಿ ಒಬ್ಬರಿಗೂ ಮಾನವೀಯತೆ ಇರಲಿಲ್ವಾ? ಎಷ್ಟು ರಾಕ್ಷಸಿ ಮನೋಭಾವ ಎಂದು ಕಣ್ಣೀರು ಹಾಕಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ