ಹರಿಯಾಣ ಚುನಾವಣೆಯಲ್ಲಿನ ಬಿಜೆಪಿಯ ಗೆಲುವಿನ ಹಿಂದೆ 'ಜಿಲೇಬಿ' ಪಾತ್ರ: ಇದರ ರಹಸ್ಯವೇನು? - Mahanayaka
9:00 PM Wednesday 20 - August 2025

ಹರಿಯಾಣ ಚುನಾವಣೆಯಲ್ಲಿನ ಬಿಜೆಪಿಯ ಗೆಲುವಿನ ಹಿಂದೆ ‘ಜಿಲೇಬಿ’ ಪಾತ್ರ: ಇದರ ರಹಸ್ಯವೇನು?

09/10/2024


Provided by

ಹರ್ಯಾಣ ವಿಧಾನಸಭಾ ಕ್ಷೇತ್ರದ ಅಚ್ಚರಿಯ ರೀತಿಯಲ್ಲಿ
ಭಾರತೀಯ ಜನತಾ ಪಕ್ಷ (ಬಿಜೆಪಿ) ಗೆದ್ದಿದೆ. ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ ಅವರ ನಿವಾಸಕ್ಕೆ ಬಿಜೆಪಿ ಪಕ್ಷವು ಜಿಲೇಬಿ ಪೆಟ್ಟಿಗೆಯನ್ನು ಕಳುಹಿಸಿದೆ. ಯಾಕಂದ್ರೆ ಗೋಹಾನಾ ರ್ಯಾಲಿಯಲ್ಲಿ ಸ್ಥಳೀಯ ಸಿಹಿತಿಂಡಿ ಅಂಗಡಿಯೊಂದರ ಬಗ್ಗೆ ರಾಹುಲ್ ಗಾಂಧಿ ಇತ್ತೀಚೆಗೆ ನೀಡಿದ ಹೇಳಿಕೆಗೆ ಈ ರೀತಿ ಪ್ರತಿಕ್ರಿಯೆ ನೀಡಲಾಗಿದೆ.

ಹರ್ಯಾಣ ಚುನಾವಣಾ ಫಲಿತಾಂಶಗಳು ಎಕ್ಸಿಟ್ ಪೋಲ್ ಹೇಳಿಕೆಗಳನ್ನು ಉಲ್ಟಾ ಮಾಡಿದೆ. 90 ಸದಸ್ಯರ ವಿಧಾನಸಭೆಯಲ್ಲಿ ಬಿಜೆಪಿ 48 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ ಪಕ್ಷವು 37 ಸ್ಥಾನಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.

ಹರಿಯಾಣ ಬಿಜೆಪಿ ಘಟಕವು ಆಹಾರ ಅಗ್ರಿಗೇಟರ್ ಅಪ್ಲಿಕೇಶನ್‌ನಿಂದ 1 ಕೆಜಿ ಜನಪ್ರಿಯ ಸಿಹಿತಿಂಡಿ ಜಿಲೇಬಿಗೆ ಆರ್ಡರ್ ನೀಡುವ ಸ್ನ್ಯಾಪ್ಶಾಟ್ ಅನ್ನು ಹಂಚಿಕೊಂಡಿದೆ. ದೆಹಲಿಯ ಕೊನಾಟ್ ಪ್ಲೇಸ್ ನ ಪ್ರಸಿದ್ಧ ಅಂಗಡಿಯಿಂದ ಆರ್ಡರ್ ಮಾಡಲಾಗಿದ್ದು, ಅಕ್ಬರ್ ರಸ್ತೆಯ 24, “ರಾಹುಲ್ ಗಾಂಧಿ ಜಿಗಾಗಿ ಜಿಲೇಬಿ” ಎಂಬ ಶೀರ್ಷಿಕೆಯಡಿ ಆರ್ಡರ್ ಮಾಡಲಾಗಿದೆ.

“ಹರಿಯಾಣದ ಎಲ್ಲಾ ಕಾರ್ಯಕರ್ತರ ಪರವಾಗಿ ಜಿಲೇಬಿಯನ್ನು ರಾಹುಲ್ ಗಾಂಧಿ ಅವರ ಮನೆಗೆ ಕಳುಹಿಸಲಾಗಿದೆ” ಎಂದು ಹರಿಯಾಣ ಬಿಜೆಪಿ ಆದೇಶದಲ್ಲಿ ತಿಳಿಸಿದೆ.

ವಿವಾದಾತ್ಮಕ ಹೇಳಿಕೆಗಳಿಗೆ ಹೆಸರುವಾಸಿಯಾದ ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರು ಪಕ್ಷದ ನಾಯಕರೊಂದಿಗೆ ಜಿಲೇಬಿ ಹಂಚಿಕೊಳ್ಳುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾ ಪೋಸ್ಟ್ ನಲ್ಲಿ, “ಇಂದಿನ ಜಿಲೇಬಿ ಸ್ವಲ್ಪ ರುಚಿಕರವಾಗಿತ್ತು” ಎಂದು ಹಿಂದಿಯಲ್ಲಿ ಕಮೆಂಟ್ ಮಾಡಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ