ಗ್ರಾಹಕರ ಸೋಗಿನಲ್ಲಿ ಬಂದು ಅಂಗಡಿಯಲ್ಲಿದ್ದ ವಸ್ತುಗಳನ್ನು ಕದ್ದ ಕಳ್ಳಿಯರು! - Mahanayaka

ಗ್ರಾಹಕರ ಸೋಗಿನಲ್ಲಿ ಬಂದು ಅಂಗಡಿಯಲ್ಲಿದ್ದ ವಸ್ತುಗಳನ್ನು ಕದ್ದ ಕಳ್ಳಿಯರು!

thieves
19/10/2024


Provided by

ಕಾರವಾರ: ಗ್ರಾಹಕರ ಸೋಗಿನಲ್ಲಿ ಬಂದ ಇಬ್ಬರು ಮಹಿಳೆಯರು ಅಂಗಡಿಯಲ್ಲಿದ್ದ ವಸ್ತುಗಳನ್ನು ಕಳವು ಮಾಡಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ದಾಂಡೇಲಿ ನಗರದಲ್ಲಿ ಶುಕ್ರವಾರ ನಡೆದಿದೆ.

ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.  ನಗರದ ಲಿಂಕ್ ರಸ್ತೆಯಲ್ಲಿರುವ ಫ್ಯಾನ್ಸಿ ಅಂಗಡಿ ಮತ್ತು ಸಂಡೆ ಮಾರ್ಕೆಟ್ ನ ಅಂಗಡಿಯಲ್ಲಿ ಈ ಘಟನೆ ನಡೆದಿದೆ.

ಫ್ಯಾನ್ಸಿ ಮಾಲಿಕನ ಗಮನ ಬೇರೆಡೆ ಸೆಳೆದು ಕೃತ್ಯ ನಡೆಸಲಾಗಿದೆ.  ಸಿಸಿ ಟಿವಿ ದೃಶ್ಯಾವಳಿಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

ಸಂಡೇ ಮಾರ್ಕೆಟಿನ ಬಟ್ಟೆ ಅಂಗಡಿಯಲ್ಲಿಯೂ ಮಾಲೀಕನನ್ನು ಯಾಮಾರಿಸಿ ಕಳ್ಳತನ ನಡೆಸಲಾಗಿದೆ. ಅಲ್ಲದೇ ಮರುದಿನವೂ ಮತ್ತೇ ಅದೇ ಬಟ್ಟೆ ಅಂಗಡಿಗೆ ಆಗಮಿಸಿದ ಕಳ್ಳಿಯರು ಕಳ್ಳತನ ಮಾಡಿದ್ದಾರೆ. ಆಗ ಎಚ್ಚೆತ್ತ ಅಂಗಡಿಯ ಮಾಲೀಕ ಬೆದರಿಸಿದ್ದು, ಈ ವೇಳೆ ಮಹಿಳೆಯರು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಘಟನೆಯ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ ಅಂತ ತಿಳಿದು ಬಂದಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ