ಬಣಕಲ್ ಮುಖ್ಯ ರಸ್ತೆಯಲ್ಲಿರುವ ಟ್ರಾನ್ಸ್ ಪಾರಂ ಸ್ಥಳಾಂತರ ಮಾಡಿ - Mahanayaka

ಬಣಕಲ್ ಮುಖ್ಯ ರಸ್ತೆಯಲ್ಲಿರುವ ಟ್ರಾನ್ಸ್ ಪಾರಂ ಸ್ಥಳಾಂತರ ಮಾಡಿ

chikkamagaluru (1)
24/10/2024


Provided by

ಕೊಟ್ಟಿಗೆಹಾರ: ಬಣಕಲ್ ಮುಖ್ಯ ರಸ್ತೆಯಲ್ಲಿ ಪಾದಚಾರಿ ಮಾರ್ಗದಲ್ಲಿರುವ ವಿದ್ಯುತ್ ಟ್ರಾನ್ಸ್ ಪಾರ್ಮರ್ ಸ್ಥಳಾಂತರಿಸಿ ಎಂದು ಬಣಕಲ್ ಗ್ರಾಮಸ್ಥ ಮುಖಂಡ ಬಿ.ಎಸ್.ವಿಕ್ರಂ ಒತ್ತಾಯಿಸಿದ್ದಾರೆ.

ವಿದ್ಯುತ್ ಟ್ರಾನ್ಸ್ ಪಾರ್ಮರ್ ಪಾದಚಾರಿ ಮಾರ್ಗದಲ್ಲಿ ಅಳವಡಿಸಿದ್ದು ಅದರ ಚೇಂಜ್ ಒವರ್ ಮಾಡುವ ಸಲಾಕೆ ಅನೇಕರಿಗೆ ತಲೆಗೆ ಹೊಡೆದು ಗಾಯಗಳಾಗುತ್ತಿವೆ.ರಸ್ತೆ ವಿಸ್ತರಣೆ ಸಮಯದಲ್ಲಿ ಅದು ಎತ್ತರದಲ್ಲಿ ಇತ್ತು. ಆದರೆ ರಸ್ತೆ ವಿಸ್ತರಣೆ ನಂತರ ರಸ್ತೆ ಎತ್ತರವಾಗಿರುವುದರಿಂದ ಅನೇಕರಿಗೆ ಇದರಿಂದ ತೊಂದರೆಯಾಗಿದೆ.

ಸದಾ ಜನರ ಓಡಾಟದಿಂದ ಈ ಪಾದಚಾರಿ ರಸ್ತೆ ಬಳಕೆಯಾಗುವುದರಿಂದ ಜನರ ಅಡಚಣೆಗೆ ಉಂಟಾಗಿರುವ ಈ ವಿದ್ಯುತ್ ಟ್ರಾನ್ಸ್ ಪಾರ್ಮರ್ ಅನ್ನು ಬದಿಗೆ ಸ್ಥಳಾಂತರಿಸಬೇಕು ಎಂದು ಗ್ರಾಮಸ್ಥ ಸುರೇಶ್ ಶೆಟ್ಟಿ ಆಗ್ರಹಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

 

ಇತ್ತೀಚಿನ ಸುದ್ದಿ