ಕುಡಿಯುವ ನೀರಿನಲ್ಲಿ ಖಾಸಗಿ ಬಸ್ ನಿಲ್ದಾಣದಲ್ಲಿ ಬಸ್ ತೊಳೆದು ಅವ್ಯವಸ್ಥೆ: ಜನರ ಆಕ್ರೋಶ
ಕೊಟ್ಟಿಗೆಹಾರ: ಕೊಟ್ಟಿಗೆಹಾರ ಖಾಸಗಿ ಬಸ್ ನಿಲ್ದಾಣದಲ್ಲಿ ಕುಡಿಯುವ ಟ್ಯಾಂಕ್ ನೀರು ಬಳಸಿ ಖಾಸಗಿ ಬಸ್ ಸಿಬ್ಬಂದಿ ಬಸ್ ತೊಳೆದು ಪರಿಸರ ಕಲುಷಿತಗೊಳಿಸುವ ಘಟನೆ ನಡೆದಿದೆ.
ಬೆಂಗಳೂರಿನ ಕಾವೇರಿ ಬಸ್ ನ ಸಿಬ್ಬಂದಿಯೋರ್ವರು ಬಸ್ ಅನ್ನು ಅಲ್ಲೇ ತೊಳೆದು ಬಸ್ ನಿಲ್ದಾಣ ಅವ್ಯವಸ್ಥೆಯ ಅಗರವಾಗಿದೆ. ಬಸ್ ತೊಳೆದ ನೀರು ಚರಂಡಿ ಇಲ್ಲದೇ ಬಂದ್ ಆಗಿರುವುದರಿಂದ ಬಸ್ ನಿಲ್ದಾಣ ನೀರು ತುಂಬಿಕೊಂಡು ರಸ್ತೆಯ ಡಾಂಬಾರು ಕೂಡ ಹಾಳಾಗುತ್ತಿದೆ.
ಮೊದಲೇ ಮಳೆಯಿಂದ ಗುಂಡಿ ಬಿದ್ದಿರುವ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನಿಂದ ಬಸ್ ತೊಳೆದು ಜನರಿಗೆ ಕುಡಿಯುವ ನೀರಿಗೆ ಕೊರತೆ ಉಂಟು ಮಾಡುತ್ತಿದ್ದಾರೆ. ಅಲ್ಲದೇ ಅನೇಕ ಸಮಯದಿಂದ ಕಾವೇರಿ ಬಸ್ ಸಿಬ್ಬಂದಿಗಳು ಈ ಬಗ್ಗೆ ಕೇಳಿದರೆ ಉಡಾಫೆ ಮಾತನಾಡುತ್ತಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಕೊಟ್ಟಿಗೆಹಾರ ಖಾಸಗಿ ಬಸ್ ನಿಲ್ದಾಣ ಅವ್ಯವಸ್ಥೆಯ ಅಗರವಾಗಿದೆ.ಈ ಬೆನ್ನಲ್ಲೇ ಖಾಸಗಿ ಬೆಂಗಳೂರಿಗೆ ರಾತ್ರಿ ಬಿಡುವ ಕಾವೇರಿ ಬಸ್ ನಿತ್ಯ ಬಸ್ ನಿಲ್ದಾಣವೆಲ್ಲ ನೀರುಮಯ ಮಾಡಿ ಸಾಗುತ್ತಿದ್ದು ಇದರಿಂದ ಸಮಸ್ಯೆಯಾಗಿದೆ. ಸಂಬಂಧಿಸಿದ ಅಧಿಕಾರಿಗಳು ಬಸ್ ಸಿಬ್ಬಂದಿಯ ವಿರುದ್ದ ಸೂಕ್ತ ಕ್ರಮ ಜರುಗಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97