ದೇವೀರಮ್ಮನ ಬೆಟ್ಟ ಹತ್ತುವಾಗ ಕಾಲು ಉಳುಕಿ, ಪ್ರಜ್ಞೆ ತಪ್ಪಿದ ಯುವತಿ - Mahanayaka
11:03 AM Wednesday 17 - December 2025

ದೇವೀರಮ್ಮನ ಬೆಟ್ಟ ಹತ್ತುವಾಗ ಕಾಲು ಉಳುಕಿ, ಪ್ರಜ್ಞೆ ತಪ್ಪಿದ ಯುವತಿ

chikkamagaluru
31/10/2024

ಚಿಕ್ಕಮಗಳೂರು : ದೇವೀರಮ್ಮನ ಬೆಟ್ಟ ಹತ್ತುವಾಗ ಕಾಲು ಉಳುಕಿ, ಯುವತಿ ಪ್ರಜ್ಞೆ ತಪ್ಪಿದ ಘಟನೆ ನಡೆದಿದ್ದು, ಯುವತಿಯನ್ನು ಪೊಲೀಸರು ಹಾಗೂ ಅಗ್ನಿಶಾಮಕದಳ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

ಬೆಟ್ಟ ಹತ್ತಿ ದೇವೀರಮ್ಮ ದರ್ಶನ ಪಡೆದು ಹಿಂದಿರುಗುವಾಗ ಯುವತಿಗೆ ಕಾಲು ಉಳುಕಿದೆ. ಇದರಿಂದಾಗಿ ಯುವತಿ ಪ್ರಜ್ಞೆ ಕಳೆದುಕೊಂಡಿದ್ದಾಳೆ. ಯುವತಿಯನ್ನ ಬೆಟ್ಟದ ತುದಿಯಿಂದ ಸ್ಟ್ರಚ್ಚರ್ ನಲ್ಲಿ ಪೊಲೀಸ್–ಅಗ್ನಿಶಾಮಕ ಸಿಬ್ಬಂದಿ ಎತ್ತಿಕೊಂಡು ಬಂದಿದ್ದಾರೆ.

ಯುವತಿ ಅಸ್ವಸ್ಥಳಾದ ಸಂದರ್ಭದಲ್ಲಿ ಇತರ ಭಕ್ತರು ಆಕೆಗೆ ಆರೈಕೆ ಮಾಡಿದ್ದಾರೆ.  ಬೇಲೂರು ತಾಲೂಕಿನ ಎಂಸಂದಿ ಗ್ರಾಮದ ಸಿಂಚನ ಎಂಬ ಯುವತಿ ಗಾಯಗೊಂಡ ಯುವತಿ ಎಂದು ತಿಳಿದು ಬಂದಿದೆ.

ಮಾಣಿಕ್ಯಧಾರಾ ಕಡೆಯಿಂದ ಬೆಟ್ಟ ಹತ್ತಿ ದೇವಿ ದರ್ಶನ ಪಡೆದು ಇಳಿಯುತ್ತಿದ್ದ ವೇಳೆ ಈ ಘಟನೆ ನಡೆದಿದೆ.  ಯುವತಿಯನ್ನು ರಕ್ಷಿಸಿದ ಬಳಿಕ  ಆಂಬುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ರವಾನಿಸಲಾಯಿತು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ