ಚಿಕಿತ್ಸೆಗೆ ಬಂದ ಮಹಿಳೆಯರ ಗುಪ್ತಾಂಗದ ಫೋಟೋ ತೆಗೆಯುತ್ತಿದ್ದ ವೈದ್ಯ ಅರೆಸ್ಟ್! - Mahanayaka

ಚಿಕಿತ್ಸೆಗೆ ಬಂದ ಮಹಿಳೆಯರ ಗುಪ್ತಾಂಗದ ಫೋಟೋ ತೆಗೆಯುತ್ತಿದ್ದ ವೈದ್ಯ ಅರೆಸ್ಟ್!

arrested
26/03/2021

ಲಾಸ್ ಏಂಜಲೀಸ್: ಚಿಕಿತ್ಸೆಗೆ ಬರುತ್ತಿದ್ದ ಮಹಿಳೆಯರ ಜೊತೆಗೆ ವೈದ್ಯನೋರ್ವ ವಿಚಿತ್ರವಾಗಿ ನಡೆದುಕೊಳ್ಳುತ್ತಿದ್ದು, ಚಿಕಿತ್ಸೆಯ ನೆಪದಲ್ಲಿ  ಗುಪ್ತಾಂಗವನ್ನು ಸ್ಪರ್ಶಿಸಿ, ಫೋಟೋ ತೆಗೆದು ಲೈಂಗಿಕ ಕಿರುಕುಳ ನೀಡುತ್ತಿದ್ದ.  ಇದೀಗ ಆತನನ್ನು ಪೊಲೀಸರು ಬಂಧಿಸಿದ್ದಾರೆ.


Provided by

74 ವರ್ಷ ವಯಸ್ಸಿನ ಟಿಂಡಲ್ ಬಂಧಿತ ಆರೋಪಿಯಾಗಿದ್ದು, ಈತ ದಕ್ಷಿಣ ಕ್ಯಾಲಿಫೋರ್ನಿಯಾ ವಿವಿಯಲ್ಲಿ ಗೈನಾಕಾಲಜಿಸ್ಟ್ ಆಗಿದ್ದ. ಈತನ ವಿರುದ್ಧ ಸುಮಾರು 700ಕ್ಕೂ ಅಧಿಕ ಮಹಿಳೆಯರು ದೂರು ನೀಡಿದ್ದಾರೆ.

2009ರಿಂದ 2016ರ ತನಕ ಹೆಲ್ತ್ ಸೆಂಟರ್ ನಲ್ಲಿದ್ದ ಈತ ಬಹಳಷ್ಟು ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ. ಈತನ ವಿರುದ್ಧ ಸುಮಾರು 35 ಪ್ರಕರಣಗಳು ಈಗಾಗಲೇ ದಾಖಲಾಗಿವೆ.

ಈ ಆರೋಪಗಳನ್ನು ಟಿಂಡಲ್ ನಿರಾಕರಿಸಿದ್ದಾನೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕ್ಯಾಲಿಫೋರ್ನಿಯಾ ವಿವಿ 7,200 ಕೋ. ದಂಡ ವಿಧಿಸಬೇಕು ಎಂದು ಆದೇಶಿಸಲಾಗಿದೆ.

ಪತ್ನಿಯ ಜನನಾಂಗಕ್ಕೆ ಮದ್ಯದ ಬಾಟಲಿ ನುಗ್ಗಿಸಿದ ಪತಿ! | ಘಟನೆಯ ಹಿಂದಿದೆ ಮಹಿಳೆಯ ಕರುಣಾಜನಕ ಕಥೆ

ಇತ್ತೀಚಿನ ಸುದ್ದಿ