ಕೆಲಸದಿಂದ ಬರುತ್ತಿದ್ದ ಯುವತಿಯ ಜೊತೆಗೆ ಅಸಭ್ಯವಾಗಿ ವರ್ತಿಸಿದ ಬಿಹಾರದ ಯುವಕರು! - Mahanayaka

ಕೆಲಸದಿಂದ ಬರುತ್ತಿದ್ದ ಯುವತಿಯ ಜೊತೆಗೆ ಅಸಭ್ಯವಾಗಿ ವರ್ತಿಸಿದ ಬಿಹಾರದ ಯುವಕರು!

bajpe
26/03/2021

ಬಜ್ಪೆ: ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವತಿಯನ್ನು ಬಿಹಾರ ಮೂಲದ ಇಬ್ಬರು ಯುವಕರು ಬಿಗಿಯಾಗಿ ಹಿಡಿದುಕೊಂಡು ಆಕೆಯ ಬಳಿ ಅಸಭ್ಯವಾಗಿ ವರ್ತಿಸಿರುವುದೇ ಅಲ್ಲದೇ ಆಕೆ ಪರ್ಸ್ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಘಟನೆಗೆ ಸಂಬಂಧಿದಂತೆ ಆರೋಪಿಗಳನ್ನು ಪೊಲೀಸರು ಮಾರ್ಚ್ 24ರಂದು ಬಂಧಿಸಿದ್ದಾರೆ.  ಕೆಲಸ ಮುಗಿಸಿ ಯುವತಿ ತನ್ನ ಮನೆಯ ಕಡೆಗೆ ಬರುತ್ತಿದ್ದಳು. ಆಗ ರಾತ್ರಿ 7:30 ಸಮಯವಾಗಿತ್ತು. ಈ ಸಂದರ್ಭ ಯುವತಿಯ ಮೇಲೆ ಇಬ್ಬರು ಆರೋಪಿಗಳ ಎರಗಿದ್ದಾರೆ.

ಜೋಕಟ್ಟೆಯ ಸಂಕದಡಿಯ ಹೊಸಮನೆಯ ನಿವಾಸಿ ಯುವತಿಗೆ ಈ ಕೆಟ್ಟ ಅನುಭವವಾಗಿದ್ದು,  ಈಕೆಯ ಮನೆಯ ಬಳಿಯಲ್ಲಿಯೇ ಈ ಘಟನೆ ನಡೆದಿದೆ. ಯುವತಿಯನ್ನು ಬಿಗಿಯಾಗಿ ಹಿಡಿದುಕೊಂಡು ಅಸಭ್ಯವಾಗಿ ವರ್ತಿಸಿ, 1 ಸಾವಿರ ರೂಪಾಯಿಗಳಿದ್ದ ಪರ್ಸ್ ದೋಚಿ ಆರೋಪಿಗಳು ಸ್ಥಳದಿಂದ  ಪರಾರಿಯಾಗಿದ್ದರು. ಇದೀಗ ಆರೋಪಿಗಳನ್ನು ಪೊಲೀಸರು ತಮ್ಮ ಶೈಲಿಯಲ್ಲಿ ವಿಚಾರಿಸುತ್ತಿದ್ದಾರೆ.

ಉದ್ಯಮಿ ಗಂಗಾಧರನ ಕಾಮಲೀಲೆಯನ್ನು ಲವ್ ಜಿಹಾದ್ ಎಂದರು!

ಇತ್ತೀಚಿನ ಸುದ್ದಿ