ಹೊಸ ವರ್ಷಕ್ಕೆ ಚಿಕ್ಕಮಗಳೂರು ಟೂರ್ ಪ್ಲಾನ್ ಮಾಡಿದ್ದೀರಾ? ಹಾಗಿದ್ರೆ ತಿಳಿದುಕೊಳ್ಳಿ ಈ ರೂಲ್ಸ್ - Mahanayaka

ಹೊಸ ವರ್ಷಕ್ಕೆ ಚಿಕ್ಕಮಗಳೂರು ಟೂರ್ ಪ್ಲಾನ್ ಮಾಡಿದ್ದೀರಾ? ಹಾಗಿದ್ರೆ ತಿಳಿದುಕೊಳ್ಳಿ ಈ ರೂಲ್ಸ್

Vikram Amate
30/12/2024


Provided by

ಚಿಕ್ಕಮಗಳೂರು: ಹೊಸ ವರ್ಷದ ಆಚರಣೆಗೆ ಸಕಲ ಸಿದ್ಧತೆಗಳು ನಡೆಯುತ್ತಿದೆ. ಈಗಾಗಲೇ ಪ್ರವಾಸಿಗರಿಂದ ತುಂಬಿರೋ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಹೊಸ ವರ್ಷದ ಆಚರಣೆಗೆ ಜಿಲ್ಲಾಡಳಿತ ಮಾರ್ಗಸೂಚಿ ಬಿಡುಗಡೆ ಮಾಡಿದೆ.

31ರ ಸಂಜೆ 6 ರಿಂದ 1ರ ಬೆಳಗ್ಗೆ 6ರವರೆಗೆ ಪ್ರವಾಸಿ ತಾಣಗಳಿಗೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ರಾಜ್ಯದ ಅತ್ಯಂತ ಎತ್ತರ ಪ್ರದೇಶವಾದ ಮುಳ್ಳಯ್ಯನಗಿರಿ, ದತ್ತಪೀಠ, ದೇವರಮನೆ ಸೇರಿದಂತೆ ಝರಿ ಫಾಲ್ಸ್ , ಮಾಣಿಕ್ಯಧಾರ ಫಾಲ್ಸ್ ನ ಪ್ರಮುಖ ಪ್ರವಾಸಿತಾಣಗಳಿಗೆ ನಿರ್ಬಂಧ ಹೇರಲಾಗಿದೆ.

ಕಡ್ಡಾಯವಾಗಿ ರೇವ್ ಪಾರ್ಟಿ ರೀತಿಯ ಕಾರ್ಯಕ್ರಮ ಇಲ್ಲ, ಮಾಡಿದ್ರೆ ಆಯೋಜಕರ ಮೇಲೆಯೇ ಪ್ರಕರಣ ದಾಖಲಿಸಲಾಗುವುದು. ರಾತ್ರಿ 10ರ ನಂತರ ಔಟ್ ಡೋರ್ ಡಿಜೆಗೆ ಸಂಪೂರ್ಣ ನಿಷೇಧ ಹೇರಲಾಗಿದೆ. ಸಿಎಲ್ 5 ಲೈಸನ್ಸ್ ಪಡೆದವರು ಸಿಸಿ ಕ್ಯಾಮರಾ ಹಾಕಬೇಕು, ಪೊಲೀಸ್ ಅನುಮತಿ ಪಡೆಯಬೇಕು. ಆದಾಯಕ್ಕಾಗಿ ಇದೇ ಮೊದಲ ಬಾರಿಗೆ ಸಿ.ಎಲ್. 5 ಗೆ ಸರ್ಕಾರ ಅನುಮತಿ ನೀಡಿದೆ. ಒಂದು ದಿನದ ಅನುಮತಿಗೆ ಸರ್ಕಾರ 12,000 ಸಾವಿರ ರೂ. ನಿಗದಿ ಮಾಡಿದೆ.

ಮುಖ್ಯರಸ್ತೆಯಲ್ಲಿ ಪೊಲೀಸರು ಜಿಗ್ ಜಾಗ್ ರೀತಿ ಬ್ಯಾರಿಕೇಡ್ ಅಳವಡಿಸಲಿದ್ದಾರೆ. ಕುಡಿದು ವಾಹನ ಚಾಲನೆ, ವೀಲ್ಹಿಂಗ್ ಮಾಡುವವರ ಮೇಲೆ ಖಾಕಿ ಹದ್ದಿನಕಣ್ಣಿಟ್ಟಿದೆ ಎಂದು ಚಿಕ್ಕಮಗಳೂರು ಎಸ್ಪಿ ವಿಕ್ರಂ ಅಮಟೆ ಮಾಹಿತಿ ನೀಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/HEkqDgrW2BlJLad5kZ1DX7

ಇತ್ತೀಚಿನ ಸುದ್ದಿ