ದೂರದರ್ಶನದಲ್ಲಿ ಬಿಜೆಪಿ ಐಟಿ ಸೆಲ್ ನ ಮುಖ್ಯಸ್ಥನಿಂದ ಸಂದರ್ಶನ: ಭಾರೀ ವಿವಾದ - Mahanayaka

ದೂರದರ್ಶನದಲ್ಲಿ ಬಿಜೆಪಿ ಐಟಿ ಸೆಲ್ ನ ಮುಖ್ಯಸ್ಥನಿಂದ ಸಂದರ್ಶನ: ಭಾರೀ ವಿವಾದ

14/01/2025


Provided by

ದೂರದರ್ಶನ ಚಾನೆಲ್ ನಲ್ಲಿ ಸಂದರ್ಶನಕಾರನಾಗಿ ಬಿಜೆಪಿ ಐಟಿ ಸೆಲ್ ನ ಮುಖ್ಯಸ್ಥ ಪ್ರತ್ಯಕ್ಷಗೊಂಡಿರುವುದು ವಿವಾದಕ್ಕೆ ಕಾರಣವಾಗಿದೆ. ಮಹಾರಾಷ್ಟ್ರ ಬಿಜೆಪಿ ಮೀಡಿಯಾ ಸೆಲ್ ನ ಅಧ್ಯಕ್ಷರಾಗಿರುವ ನವನಾಥ್ ಬ್ಯಾನ್ ಎಂಬವರು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಸಂದರ್ಶನವನ್ನು ನಡೆಸಿದ್ದಾರೆ. ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ 2024 ಡಿಸೆಂಬರ್ ಆರರಂದು ದೂರದರ್ಶನ ಈ ಸಂದರ್ಶನವನ್ನು ಪ್ರಸಾರ ಮಾಡಿದೆ.

ಟ್ಯಾಲೆಂಟ್ ಆರ್ಟಿಸ್ಟ್ ಬುಕಿಂಗ್ ಸಿಸ್ಟಮ್ ನ ಮೂಲಕ ಮುಖ್ಯಮಂತ್ರಿ ಫಡ್ನ ವೀಸ್ ಅವರ ಸಂದರ್ಶನ ನಡೆಸುವುದಕ್ಕೆ ನವನಾಥನನ್ನು ಆಯ್ಕೆ ಮಾಡಿದ್ದೇವೆ ಮತ್ತು ಅದಕ್ಕೆ ಬೇಕಾದ ಮಜೂರಿಯನ್ನು ನೀಡಿದ್ದೇವೆ ಎಂದು ದೂರದರ್ಶನ ಸಮರ್ಥಿಸಿದೆ.

ಪ್ರತಿಭಾನ್ವಿತ ಆರ್ಟಿಸ್ಟ್ ಗಳನ್ನು ಆಯ್ಕೆ ಮಾಡುವುದಕ್ಕಾಗಿ ದೂರದರ್ಶನದಲ್ಲಿ ಟ್ಯಾಲೆಂಟ್ ಆರ್ಟಿಸ್ಟ್ ಬುಕಿಂಗ್ ಎಂಬ ಸಿಸ್ಟಮ್ ಇದೆ. ಈ ವ್ಯವಸ್ಥೆಯ ಆಧಾರದಲ್ಲಿಯೇ ನವನಾಥ್ ಬ್ಯಾನ್ ಅವರನ್ನು ಫಡ್ನವಿಸ್ ಅವರ ಸಂದರ್ಶನ ಕಾರನಾಗಿ ಆಯ್ಕೆ ಮಾಡಲಾಗಿದೆ ಎಂದು ದೂರದರ್ಶನ ಹೇಳಿದೆ.
ಇದೇ ವೇಳೆ ಈ ಪ್ರಕರಣವನ್ನು ಪ್ರಶ್ನಿಸಿ ಯಾರಾದರೂ ನ್ಯಾಯಾಲಯಕ್ಕೆ ಹೋದರೆ ದೂರದರ್ಶನ ಸಿಕ್ಕಿ ಬೀಳಬಹುದು ಎಂದು ಪ್ರಸಾರ ಭಾರತಿಯ ಮಾಜಿ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಆಗಿರುವ ಜವಾಹರ್ ಸಿರ್ಕಾರ್ ಹೇಳಿದ್ದಾರೆ.

ದೂರದರ್ಶನದ ಮಾನ ಕಳೆದು ಹೋಗಿದೆ. ಈ ಸಂದರ್ಶನದಲ್ಲಿ ಇಬ್ಬರು ಒಂದೇ ಪಕ್ಷದವರಾಗಿದ್ದಾರೆ. ಬಿಜೆಪಿಯ ರಾಜಕೀಯ ಅಜೆಂಡಾವನ್ನು ಜಾರಿಗೊಳಿಸುವ ಒಂದು ಸಂಸ್ಥೆಯಾಗಿ ದೂರದರ್ಶನ ಮಾರ್ಪಟ್ಟಿದೆ. ನಾಳೆ ಉದ್ಧವ್ ಠಾಕ್ರೆ ಅವರ ಪಕ್ಷ ಅಧಿಕಾರಕ್ಕೆ ಬಂದರೆ ಇದೇ ರೀತಿಯ ಸಂದರ್ಶನವನ್ನು ದೂರದರ್ಶನ ನಡೆಸಬಹುದೇ/ ಉದ್ದವ್ ಠಾಕ್ರೆ ಅವರ ಸಂದರ್ಶನ ನಡೆಸುವುದಕ್ಕೆ ಶಿವಸೇನೆಯ ಮುಖವಾಣಿ ಪತ್ರಿಕೆಯಾದ ಸಾಮ್ನಾದ ಸಂಪಾದಕರನ್ನು ದೂರದರ್ಶನ ಕರೆಸಬಹುದೇ ಎಂದವರು ಪ್ರಶ್ನಿಸಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ