‘ಲವ್ ಜಿಹಾದ್’ ಹೆಸರಲ್ಲಿ ಯುವಕನಿಗೆ ಥಳಿತ: ಗುಂಪಿನಿಂದ ಯುವತಿಗೂ ಟಾರ್ಚರ್

ಲವ್ ಜಿಹಾದ್ ಎಂದು ಆರೋಪಿಸಿ ಯುವಕನನ್ನು ಥಳಿಸಿದ ಮತ್ತು ಯುವತಿಯನ್ನು ಸತಾಯಿಸಿದ ಘಟನೆ ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದಿದೆ. ಯುವಕನನ್ನು ತನ್ನ ಗೆಳೆಯ ಎಂದು ಯುವತಿ ಹೇಳಿದರೂ ಕೇಳದೆ ಅವರು ಆ ಯುವಕನಿಗೆ ಥಳಿಸಿದ್ದಾರೆ ಮತ್ತು ವಿಚಾರಣೆ ನಡೆಸಿದ್ದಾರೆ. ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಈತನೊಂದಿಗೆ ನಿನ್ನ ಸಂಬಂಧ ಏನು ಎಂದು ಥಳಿಸುತ್ತಿರುವ ಗುಂಪಿನ ನಾಯಕ ಯುವತಿಯಲ್ಲಿ ಪ್ರಶ್ನಿಸುವುದು ವಿಡಿಯೋದಲ್ಲಿದೆ. ತನ್ನ ತಂದೆ ಮತ್ತು ತಾಯಿಯನ್ನು ಸ್ಥಳಕ್ಕೆ ಕರೆಸುವುದಕ್ಕೆ ಅವರು ಬಲವಂತ ಪಡಿಸಿದರು ಎಂದು ಯುವತಿ ಆ ಬಳಿಕ ಹೇಳಿದ್ದಾರೆ. ಈ ಇಬ್ಬರನ್ನೂ ಈ ಗುಂಪು ಪೊಲೀಸರಿಗೆ ಹಸ್ತಾಂತರಿಸಿದೆ. ಘಟನೆಯ ಕುರಿತಂತೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj