ಇನ್ಮುಂದೆ ವಾಟ್ಸಾಪ್ ನಲ್ಲೇ ಪೊಲೀಸ್ ದೂರು ಕೊಡ್ಬಹುದು: ಈ ರಾಜ್ಯದಲ್ಲಿ ಮಾತ್ರ! - Mahanayaka

ಇನ್ಮುಂದೆ ವಾಟ್ಸಾಪ್ ನಲ್ಲೇ ಪೊಲೀಸ್ ದೂರು ಕೊಡ್ಬಹುದು: ಈ ರಾಜ್ಯದಲ್ಲಿ ಮಾತ್ರ!

24/02/2025


Provided by

ವಾಟ್ಸ್​ಆ್ಯಪ್ ಮೂಲಕವೂ ಪೊಲೀಸರಿಗೆ ದೂರುಗಳನ್ನು ಕಳುಹಿಸಬಹುದು. ಜಮ್ಮು ಮತ್ತು ಕಾಶ್ಮೀರ ಪೊಲೀಸರು ಈ ಉಪಕ್ರಮವನ್ನು ಪ್ರಾರಂಭಿಸಿದ್ದಾರೆ. ವಾಹನದಲ್ಲಿ ಸಾಗುತ್ತಿದ್ದಾಗ ಹಲ್ಲೆಗೆ ಒಳಗಾಗಿದ್ದ ವ್ಯಕ್ತಿ ಅಲ್ಲಿಂದಲೇ ದೂರು ದಾಖಲಿಸುವ ವಾಟ್ಸ್​ಆ್ಯಪ್ ಸಂದೇಶ ಕಳುಹಿಸಿದ್ದರು. ಇದನ್ನು ಆಧರಿಸಿ ಪೊಲೀಸರು ಎಫ್‌ ಐ ಆರ್‌ ದಾಖಲಿಸಿದ್ದಾರೆ.

ಕಳೆದ ಶನಿವಾರ, ಮೊದಲ ಬಾರಿಗೆ, ವಾಟ್ಸ್​ಆ್ಯಪ್ ನಲ್ಲಿ ಬಂದ ದೂರಿನ ಆಧಾರದ ಮೇಲೆ ಪೊಲೀಸರು ಇ-ಎಫ್‌ಐಆರ್ ದಾಖಲಿಸಿದ್ದಾರೆ. ಡಿಜಿಟಲ್ ಪೋಲೀಸಿಂಗ್ ಕಡೆಗೆ ಒಂದು ಹೆಜ್ಜೆ ಮುಂದಿಡುತ್ತಾ, ವಾಟ್ಸ್​ಆ್ಯಪ್ ನಲ್ಲಿ ಬಂದ ದೂರಿನ ಮೇರೆಗೆ ಹರಿದ್ವಾರದ ವಿಲ್ಗಮ್ ಪೊಲೀಸ್ ಠಾಣೆಯಲ್ಲಿ ಮೊದಲ ಇ-ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

ಮಾಧ್ಯಮ ವರದಿಗಳ ಪ್ರಕಾರ, ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿರುವ ಇಮ್ತಿಯಾಜ್ ಅಹ್ಮದ್ ದಾರ್ ಎಂಬವರು ವಾಟ್ಸ್​ಆ್ಯಪ್ ಮೂಲಕ ಪೊಲೀಸರಿಗೆ ದೂರು ನೀಡಿದ್ದರು. ಕುಪ್ವಾರಾ ಜಿಲ್ಲೆಯ ಹಂಜಿಪೋರಾ ನಿವಾಸಿ ದಾರ್, ಶನಿವಾರ ತಾರತ್‌ಪೋರಾದಿಂದ ಶ್ರೀನಗರಕ್ಕೆ ಹೋಗುತ್ತಿರುವುದಾಗಿ ಹೇಳಿದರು. ದಾರಿಯಲ್ಲಿ, ಅವರು ವಿಲ್ಗಮ್ ಬಳಿ ತಲುಪಿದಾಗ, ಇಬ್ಬರು ಯುವಕರು ಬಲವಂತವಾಗಿ ತಡೆದು ಥಳಿಸಿದರು. ಈ ಯುವಕರನ್ನು ವಿಲ್ಗಮ್‌ನ ಶೆಹ್ನಿಪೋರಾ ನಿವಾಸಿಗಳಾದ ಆಶಿಕ್ ಹುಸೇನ್ ಭಟ್ ಮತ್ತು ಗೌಹರ್ ಅಹ್ಮದ್ ಭಟ್ ಎಂದು ಗುರುತಿಸಲಾಗಿದೆ. ಹಲ್ಲೆಯಲ್ಲಿ ತನಗೆ ಹಲವಾರು ಗಾಯಗಳಾಗಿವೆ ಎಂದು ದೂರುದಾರರು ತಿಳಿಸಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ