ಫೆಲೆಸ್ತೀನಿಯರ ವಿರುದ್ಧ ಇಸ್ರೇಲ್ ನಡೆಸುತ್ತಿರುವುದು ಆಕ್ರಮಣವಾಗಿದೆ: ಬರಹಗಾರ ಸಜಿ ಮಾರ್ಕೋಸ್ ಅಭಿಮತ

ಫೆಲೆಸ್ತೀನಿಯರ ವಿರುದ್ಧ ಇಸ್ರೇಲ್ ನಡೆಸುತ್ತಿರುವುದು ಆಕ್ರಮಣವಾಗಿದೆ ಮತ್ತು ಫೆಲೆಸ್ತೀನಿಯರು ನಡೆಸ್ತಾ ಇರುವುದು ಪ್ರತ್ಯಾಕ್ರಮಣವಾಗಿದೆ ಎಂದು ಬರಹಗಾರ ಮತ್ತು ಸಂಚಾರಿಯಾಗಿ ಗುರುತಿಸಿಕೊಂಡಿರುವ ಸಜಿ ಮಾರ್ಕೋಸ್ ಬರೆದಿದ್ದಾರೆ. ಪ್ರತ್ಯಾಕ್ರಮಣ ಹೇಗಿರಬೇಕು ಎಂದು ಹೇಳಬೇಕಾದದ್ದು ಮಕ್ಕಳನ್ನು ಮತ್ತು ಭೂಮಿಯನ್ನು ಕಳೆದುಕೊಳ್ಳದ, ನಿರಾಶ್ರಿತ ಶಿಬಿರದಲ್ಲಿ ವಾಸಿಸದ ಎಸಿ ರೂಮಲ್ಲಿ ಕುಳಿತವರಲ್ಲ ಎಂದವರು ಅಭಿಪ್ರಾಯಪಟ್ಟಿದ್ದಾರೆ.
ಅಲ್ಲಿ ಸಾಮ್ರಾಜ್ಯಶಾಹಿತ್ವವನ್ನು ಹೊರ ಹಾಕುವ ಕೆಲಸ ನಡೆಯುತ್ತಿದೆ. ಇದು ಭಾರತದಲ್ಲಿ ನಡೆದರೂ ಸೌತ್ ಆಫ್ರಿಕಾದಲ್ಲಿ ನಡೆದರೂ ಅದಕ್ಕೆ ಇರಬೇಕಾದ ನೋಟ ಒಂದೇ ಆಗಿರಬೇಕು. ಫೆಲೆಸ್ತೀನ್ ಕಡೆಗಿನ ವಲಸೆಯು 1881ರ ಬಳಿಕ ಆರಂಭವಾಯಿತು. ಒಂದು ಆಧುನಿಕ ರಾಷ್ಟ್ರ ನಿರ್ಮಾಣವಾಗಬೇಕಾದದ್ದು ಸುಳ್ಳುಗಳ ಮೂಲಕ ಅಲ್ಲ. ಧರ್ಮ ಗ್ರಂಥಗಳ ಆಧಾರದಲ್ಲೂ ಅಲ್ಲ ಎಂದು ಗಾಂಧೀಜಿ ಹೇಳಿದ್ದರು. ಇದಕ್ಕಿಂತ ದೊಡ್ಡ ಮಾತು ಬೇರೇನಿದೆ ಎಂದವರು ಪ್ರಶ್ನಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj