ಔರಂಗಜೇಬ್ ರನ್ನು ಲಾಡೆನ್ ಗೆ ಹೋಲಿಸಿದ್ದ ಶಿಂಧೆ: ಬೆಂಕಿ ಹಚ್ಚುವ ಕೆಲಸ ಮಾಡಿದ್ರಾ ಮಹಾ ಡಿಸಿಎಂ? - Mahanayaka

ಔರಂಗಜೇಬ್ ರನ್ನು ಲಾಡೆನ್ ಗೆ ಹೋಲಿಸಿದ್ದ ಶಿಂಧೆ: ಬೆಂಕಿ ಹಚ್ಚುವ ಕೆಲಸ ಮಾಡಿದ್ರಾ ಮಹಾ ಡಿಸಿಎಂ?

19/03/2025


Provided by

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ವಿಧಾನಸಭೆಯಲ್ಲಿ ನೀಡಿರುವ ಹೇಳಿಕೆ ಔರಂಗಜೇಬ್ ಪ್ರಕರಣಕ್ಕೆ ಬೆಂಕಿ ಹಚ್ಚುವ ಕೆಲಸವನ್ನು ಮಾಡಿದೆ ಎಂದು ಹೇಳಲಾಗುತ್ತಿದೆ. ವಿಧಾನಸಭೆಯಲ್ಲಿ ಮಾತಾಡುತ್ತಾ ಅವರು ಔರಂಗಜೇಬನನ್ನು ಒಸಾಮ ಬಿನ್ ಲಾಡೆನ್ ಜೊತೆ ಸಮೀಕರಿಸಿ ಮಾತಾಡಿದ್ದರು. ಒಸಾಮ ಬಿನ್ ಲಾಡೆನ್ ನ ದೇಹವನ್ನು ಮಣ್ಣು ಮಾಡುವ ಬದಲು ಅಮೆರಿಕ ಸಮುದ್ರಕ್ಕೆ ಎಸೆದಿದೆ ಎಂದು ಅವರು ಹೇಳಿದ್ದರು.

ಔರಂಗ ಜೇಬ್ ಸಮಾಧಿಯನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿ ಸಂಘ ಪರಿವಾರ ನಡೆಸಿದ ಪ್ರತಿಭಟನೆಯು ಮಹಾರಾಷ್ಟ್ರದ ನಾಗಪುರದಲ್ಲಿ ಘರ್ಷಣೆ ಒಳಗಾಗಿರುವುದರ ನಡುವೆಯೇ ಈ ಬಗ್ಗೆ ವಿಶ್ಲೇಷಣೆ ನಡೆಯುತ್ತಿದೆ. ಪವಿತ್ರ ಕುರ್ ಆನನ್ನು ಸುಡಲಾಗಿದೆ ಎಂಬ ವದಂತಿ ಮತ್ತು ಆ ಬಳಿಕ ನಡೆದ ಹಿಂಸಾಚಾರದಲ್ಲಿ ಹಲವು ಪೊಲೀಸರಿಗೆ ಗಾಯವಾಗಿದೆ. ನೂರಾರು ಮಂದಿಯ ಮೇಲೆ ಪ್ರಕರಣ ದಾಖಲಾಗಿದೆ. ಈಗಾಗಲೇ ಈ ಘರ್ಷಣೆಗೆ ಚಾವ ಸಿನಿಮಾದ ಪ್ರಚೋದನೆ ಇದೆ ಎಂದು ಮುಖ್ಯಮಂತ್ರಿ ಪಡ್ನವಿಸ್ ಹೇಳಿದ್ದಾರೆ. ಮಾತ್ರ ಅಲ್ಲ ಈ ಘರ್ಷಣೆಗೆ ಸಂಚು ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ