ಮೀರತ್ ವಿವಿಯಲ್ಲಿ ನಮಾಝ್ ಆರೋಪ: ವಿದ್ಯಾರ್ಥಿಯನ್ನು ಅರೆಸ್ಟ್ ಮಾಡಿದವ್ರನ್ನೇ ಜೈಲಿಗಟ್ಟಿದ ಪೊಲೀಸರು

ಉತ್ತರ ಪ್ರದೇಶದ ಮೀರತ್ ನ ಐ ಐ ಎಂ ಟಿ ಯೂನಿವರ್ಸಿಟಿ ಕ್ಯಾಂಪಸ್ ನಲ್ಲಿ ನಮಾಜ್ ಮಾಡಿದ ಆರೋಪ ಹೊರಿಸಿ ಖಾಲಿದ್ ಮೇವಾತಿ ಎಂಬ ವಿದ್ಯಾರ್ಥಿಯನ್ನು ಉತ್ತರಪ್ರದೇಶದ ಪೊಲೀಸರು ಬಂಧಿಸಿ ಜೈಲಿಗಟ್ಟಿರುವುದನ್ನು ಪ್ರಶ್ನಿಸಿದ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಈ ವಿದ್ಯಾರ್ಥಿಯ ಬಂಧನವನ್ನು ಪ್ರಶ್ನಿಸಿ ಸುಮಾರು 400 ರಷ್ಟು ವಿದ್ಯಾರ್ಥಿಗಳು ಕ್ಯಾಂಪಸ್ಸಿನಲ್ಲಿ ಮೌನ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ.
ನಮ್ಮ ಯುನಿವರ್ಸಿಟಿಯಲ್ಲಿ ಪೂಜೆಯನ್ನು ನೆರವೇರಿಸಲಾಗುತ್ತದೆ. ಹೀಗಿರುವಾಗ ಉಪವಾಸ ಹಿಡಿದ ವಿದ್ಯಾರ್ಥಿಗಳ ಮೇಲೆ ಈ ಬಗೆಯ ಹಿಂಸೆ ಏಕೆ ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದ್ದಾರೆ. ಇದೇ ವೇಳೆ ಅನುಮತಿ ಪಡೆಯದೆ ಪ್ರತಿಭಟನೆ ನಡೆಸಿರುವುದು ಕಾನೂನುಬಾಹಿರ ಎಂದು ಯುನಿವರ್ಸಿಟಿಯ ಆಡಳಿತ ಅಧಿಕಾರಿಗಳು ಹೇಳಿದ್ದಾರೆ
22 ವರ್ಷದ ವಿದ್ಯಾರ್ಥಿ ಖಾಲಿದ್ ಕ್ಯಾಂಪಸ್ ನ ತೆರೆದ ಭಾಗದಲ್ಲಿ ನಮಾಜ್ ಮಾಡಿದ್ದ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೆಯಾದ ತಕ್ಷಣ ಸ್ಥಳೀಯ ಬಲಪಂಥೀಯ ಗುಂಪು ಅದನ್ನು ಪ್ರತಿಭಟಿಸಿತ್ತು. ಇದರ ಬಳಿಕ ಆತನನ್ನು ಪೋಲೀಸರು ಬಂಧಿಸಿದ್ದರು. ಈ ವಿಡಿಯೋ ಬಿಡುಗಡೆಗೊಂಡ ಬಳಿಕ ಯುನಿವರ್ಸಿಟಿಯು ಖಾಲಿದ್ ನನ್ನು ಕಾಲೇಜಿನಿಂದ ಸಸ್ಪೆ9ಡ್ ಮಾಡಿತ್ತು. ಮಾತ್ರವಲ್ಲ, ಆತನ ಜೊತೆಗೆ ಮೂವರು ಭದ್ರತಾ ಸಿಬ್ಬಂದಿಯನ್ನು ಕೂಡ ಸಸ್ಪೆಂಡ್ ಮಾಡಿತ್ತು.
ಸ್ಥಳೀಯ ವ್ಯಕ್ತಿಯ ದೂರಿನಂತೆ ಕಾಲಿನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಮತ್ತು ಆತನನ್ನು ಜೈಲಿಗೆ ಅಟ್ಟಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj