ಯತ್ನಾಳ್ ಉಚ್ಛಾಟನೆಯಿಂದ ಒತ್ತಡ: ಕಾರು ಅಪಘಾತದಲ್ಲಿ ಬಿಜೆಪಿ ಮುಖಂಡ ಸಾವು - Mahanayaka

ಯತ್ನಾಳ್ ಉಚ್ಛಾಟನೆಯಿಂದ ಒತ್ತಡ: ಕಾರು ಅಪಘಾತದಲ್ಲಿ ಬಿಜೆಪಿ ಮುಖಂಡ ಸಾವು

yathnal
27/03/2025

ವಿಜಯಪುರ: ಬಿಜೆಪಿಯಿಂದ ಯತ್ನಾಳ್ ಉಚ್ಛಾಟನೆಯಿಂದ ಮಾನಸಿಕ ಒತ್ತಡದಲ್ಲಿದ್ದ ಬಿಜೆಪಿ ಪದಾಧಿಕಾರಿಯೊಬ್ಬರು ಕಾರು ಅಪಘಾತದಲ್ಲಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.

ವಿಜಯಪುರ ನಗರದ ರಂಭಾಪುರ ನಿವಾಸಿ ಸಂತೋಷ್ ತಟಗಾರ ಮೃತಪಟ್ಟವರಾಗಿದ್ದಾರೆ. ಇವರು ಬಿಜೆಪಿ ಮಂಡಲದ ಎಸ್ ಟಿ ಮೋರ್ಚಾದ ಕಾರ್ಯದರ್ಶಿಯಾಗಿದ್ದರು ಎಂದು ತಿಳಿದು ಬಂದಿದೆ.

ಯತ್ನಾಳ್ ಅವರನ್ನು 6 ವರ್ಷಗಳ ಕಾಲ ಉಚ್ಛಾಟನೆ ಮಾಡಿದ್ದ ಸುದ್ದಿ ತಿಳಿದು ಸಂತೋಷ್ ಒತ್ತಡಕ್ಕೊಳಗಾಗಿದ್ದರು. ಮಂಡಲ ಅಧ್ಯಕ್ಷ ಶಂಕರ ಹೂಗಾರ ಅವರಿಗೆ ಕರೆ ಮಾಡಿ, ಯತ್ನಾಳ್ ಅವರ ಉಚ್ಛಾಟನೆ ಬಗ್ಗೆ ಮನನೊಂದು ಮಾತನಾಡಿದ್ದರಂತೆ.


Provided by

ಮುಂದೇನು ಮಾಡುವುದು, ನಾನೂ ರಾಜೀನಾಮೆ ಕೊಡುತ್ತೇನೆ ಎಂದು ಸಂತೋಷ್ ಕರೆ ಕಟ್ ಮಾಡಿದ್ದರು. ಡಿಪ್ರೆಷನ್ ನಲ್ಲಿ ಕಾರು ಚಲಾಯಿಸಿದ ಹಿನ್ನೆಲೆ ಕಾರು ಮರಕ್ಕೆ ಡಿಕ್ಕಿ ಹೊಡೆದು ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/HEkqDgrW2BlJLad5kZ1DX7

ಇತ್ತೀಚಿನ ಸುದ್ದಿ