ಯುಗಾದಿ ಸಂಭ್ರಮಕ್ಕೆ ರಾಜ್ಯದ ಜನತೆಗೆ ನಂದಿನಿ ಹಾಲಿನ ಬೆಲೆ ಏರಿಕೆ ಶಾಕ್ ! - Mahanayaka

ಯುಗಾದಿ ಸಂಭ್ರಮಕ್ಕೆ ರಾಜ್ಯದ ಜನತೆಗೆ ನಂದಿನಿ ಹಾಲಿನ ಬೆಲೆ ಏರಿಕೆ ಶಾಕ್ !

nandini milk price
27/03/2025

ಬೆಂಗಳೂರು: ಯುಗಾದಿ ಹಬ್ಬದ ಸಂಭ್ರಮದಲ್ಲಿದ್ದ ರಾಜ್ಯದ ಜನತೆಗೆ ರಾಜ್ಯ ಸರ್ಕಾರ ಬೆಲೆ ಏರಿಕೆಯ ಬಿಸಿ ಮುಟ್ಟಿಸಿದೆ. ಪ್ರತಿ ಲೀಟರ್ ನಂದಿನಿ ಹಾಲಿನ ದರ 4 ರೂ. ಹೆಚ್ಚಳ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.


Provided by

ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಬೆಲೆ ಏರಿಕೆಗೆ ಒಪ್ಪಿಗೆ ಸೂಚಿಸಲಾಗಿದೆ. ಏಪ್ರಿಲ್ 1ರಿಂದ ನೂತನ ದರ ಜಾರಿಯಾಗಲಿದೆ.

ಬೆಲೆ ಏರಿಕೆ ಎಷ್ಟು?

ನೀಲಿ ಪ್ಯಾಕೆಟ್ ಹಾಲು -– 44 ರೂ ನಿಂದ 48 ರೂ
ಆರೆಂಜ್ ಪ್ಯಾಕೆಟ್ ಹಾಲು -– 54 ರೂ. ನಿಂದ 58 ರೂ.
ಸಮೃದ್ಧಿ ಹಾಲಿನ ಪ್ಯಾಕೆಟ್– 56 ರೂ. ನಿಂದ 60 ರೂ.
ಗ್ರೀನ್ ಸ್ಪೇಷಲ್– 54 ರೂ. ನಿಂದ 58 ರೂ.
ನಾರ್ಮಲ್ ಗ್ರೀನ್– 52 ರೂ. ನಿಂದ 56 ರೂ


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/HEkqDgrW2BlJLad5kZ1DX7

ಇತ್ತೀಚಿನ ಸುದ್ದಿ