ನಿರ್ಮಲಾ ಸೀತಾರಾಮನ್ ನೂತನ ಶಿಕ್ಷಣ ಸಚಿವೆ ಆಗ್ತಾರಾ? ಅಮಿತ್ ಶಾಗೆ ಉಪಪ್ರಧಾನಿ ಪಟ್ಟ? | ಕೇಂದ್ರ ಸಚಿವ ಸಂಪುಟ ಪುನಾರಚನೆ ಕಸರತ್ತು - Mahanayaka

ನಿರ್ಮಲಾ ಸೀತಾರಾಮನ್ ನೂತನ ಶಿಕ್ಷಣ ಸಚಿವೆ ಆಗ್ತಾರಾ? ಅಮಿತ್ ಶಾಗೆ ಉಪಪ್ರಧಾನಿ ಪಟ್ಟ? | ಕೇಂದ್ರ ಸಚಿವ ಸಂಪುಟ ಪುನಾರಚನೆ ಕಸರತ್ತು

union cabinet reshuffle
25/07/2026

ನವದೆಹಲಿ: ಕೇಂದ್ರ ಸರ್ಕಾರದಲ್ಲಿ ಶೀಘ್ರದಲ್ಲೇ ಭಾರಿ ಸಚಿವ ಸಂಪುಟ ಪುನಾರಚನೆ (Union Cabinet Reshuffle) ನಡೆಯಲಿದೆ ಎಂಬ ವದಂತಿಗಳು ತೀವ್ರಗೊಂಡಿದ್ದು, ದೆಹಲಿ ರಾಜಕೀಯ ವಲಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ನೀಟ್ (NEET) ಪರೀಕ್ಷೆ ಅಕ್ರಮಗಳ ಕುರಿತು ನಡೆಯುತ್ತಿರುವ ಪ್ರತಿಭಟನೆಗಳು ಮತ್ತು ವಿರೋಧ ಪಕ್ಷಗಳ ಒತ್ತಡದ ಹಿನ್ನೆಲೆಯಲ್ಲಿ ಪ್ರಮುಖ ಇಲಾಖೆಗಳ ಹೊಣೆಗಾರಿಕೆಯಲ್ಲಿ ಬದಲಾವಣೆ ತರಲು ಪ್ರಧಾನಿ ನರೇಂದ್ರ ಮೋದಿ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ಶಿಕ್ಷಣ ಇಲಾಖೆಗೆ ನಿರ್ಮಲಾ ಸೀತಾರಾಮನ್?

ನೀಟ್ ಅಕ್ರಮದ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಸಚಿವ ಸ್ಥಾನದಿಂದ ಸಂಪೂರ್ಣವಾಗಿ ಕೈಬಿಡಲಾಗಿದೆ, ಹೀಗಾಗಿ ಧರ್ಮೇಂದ್ರ ಪ್ರಧಾನ್ ಅವರ ಇಲಾಖೆಯನ್ನು ಬದಲಾಯಿಸಿ, ಅವರ ಜಾಗಕ್ಕೆ ಹಾಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ನೂತನ ಶಿಕ್ಷಣ ಸಚಿವೆಯನ್ನಾಗಿ ಮಾಡುವ ಪ್ರಸ್ತಾಪ ಪರಿಶೀಲನೆಯಲ್ಲಿದೆ ಎನ್ನಲಾಗುತ್ತಿದೆ.

ಹೊಸ ಹಣಕಾಸು ಸಚಿವರು ಯಾರು?

ನಿರ್ಮಲಾ ಸೀತಾರಾಮನ್ ಅವರಿಗೆ ಬೇರೆ ಖಾತೆ ನೀಡಿದರೆ, ಆರ್‌ಬಿಐ (RBI) ಮಾಜಿ ಗವರ್ನರ್ ಹಾಗೂ ಪ್ರಧಾನಿ ಮೋದಿ ಅವರ ನಿಕಟವರ್ತಿ ಶಕ್ತಿಕಾಂತ್ ದಾಸ್ ಅಥವಾ ಹಾಲಿ ವಾಣಿಜ್ಯ ಸಚಿವ ಪಿಯೂಶ್ ಗೋಯಲ್ ಅವರಿಗೆ ಹಣಕಾಸು ಇಲಾಖೆಯ ಹೊಣೆಗಾರಿಕೆ ಸಿಗುವ ಸಾಧ್ಯತೆಯಿದೆ.

ಗೃಹ ಸಚಿವ ಅಮಿತ್ ಶಾ ಅವರಿಗೆ ಉಪಪ್ರಧಾನಿ (Deputy Prime Minister) ಪಟ್ಟ ನೀಡುವ ಕುರಿತು ತೀವ್ರ ಚರ್ಚೆಗಳು ನಡೆಯುತ್ತಿವೆ. ಇದು ಬಿಜೆಪಿಯ ಭವಿಷ್ಯದ ನಾಯಕತ್ವದ ದಿಕ್ಕನ್ನು ಸೂಚಿಸುವ ಪ್ರಮುಖ ಹೆಜ್ಜೆಯಾಗಲಿದೆ ಎನ್ನಲಾಗಿದ್ದು, ಈ ವಿಷಯದಲ್ಲಿ ಆರ್‌ ಎಸ್‌ ಎಸ್ (RSS) ನಿಲುವು ನಿರ್ಣಾಯಕವಾಗಲಿದೆ.

ಮಿತ್ರಪಕ್ಷಗಳಿಗೆ ಆದ್ಯತೆ: ಇತ್ತೀಚೆಗೆ ಎನ್‌ ಡಿಎ (NDA) ಮೈತ್ರಿಕೂಟ ಸೇರಿದ ಪಕ್ಷಗಳಿಗೆ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು (JDU) ಗೆ ಹೆಚ್ಚಿನ ಸಚಿವ ಸ್ಥಾನ ನೀಡುವ ಸಾಧ್ಯತೆಯಿದೆ.

ಶ್ರಿಕಾಂತ್ ಶಿಂಧೆ ಹಾಗೂ ರಾಘವ್ ಚಡ್ಡಾ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಪುತ್ರ ಡಾ. ಶ್ರಿಕಾಂತ್ ಶಿಂಧೆ ಹಾಗೂ ಎಎಪಿಯಿಂದ ಇತ್ತೀಚೆಗೆ ಬಂದ ರಾಘವ್ ಚಡ್ಡಾ ಅವರಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ಸಿಗುವ ನಿರೀಕ್ಷೆಯಿದೆ.  ಮಾಜಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಮತ್ತೆ ಸಂಪುಟಕ್ಕೆ ಕಂಬ್ಯಾಕ್ ಮಾಡುವ ಸಾಧ್ಯತೆಯಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ