ಸಾರಿಗೆ ನೌಕರರ ಮುಷ್ಕರ:  ಖಾಸಗಿ ಬಸ್ ಗಳಿಂದ ಜನರ ಸುಲಿಗೆ - Mahanayaka
10:25 PM Wednesday 20 - August 2025

ಸಾರಿಗೆ ನೌಕರರ ಮುಷ್ಕರ:  ಖಾಸಗಿ ಬಸ್ ಗಳಿಂದ ಜನರ ಸುಲಿಗೆ

ksrtc
07/04/2021


Provided by

ವಿಜಯಪುರ: ಸಾರಿಗೆ ನೌಕರರ ಮುಷ್ಕರ ಹಾಗೂ ಸರ್ಕಾರದ ಕೆಟ್ಟ ಹಠದಿಂದಾಗಿ ಸಾರ್ವಜನಿಕರು ಪರದಾಡುತ್ತಿದ್ದು, ಖಾಸಗಿ ಬಸ್ ಗಳು ಬೇಕಾಬಿಟ್ಟಿ ಜನರನ್ನು ಸುಲಿಗೆ ಮಾಡುತ್ತಿದೆ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಜಿಲ್ಲೆಯ ಮುದ್ದೇಬಿಹಾಳ, ತಾಳಿಕೋಟೆ ಭಾಗದಲ್ಲಿ ಬಸ್ ಸಂಚಾರ ಬಹುತೇಕ ಕ್ಷೀಣಿಸಿದ್ದು, ಖಾಸಗಿ ವಾಹನಗಳ ದರ್ಬಾರ್ ಹೆಚ್ಚಿದೆ. ಖಾಸಗಿ ವಾಹನಗಳ ಮಾಲೀಕರು ಮನಬಂದಂತೆ ಪ್ರಯಾಣ ದರ ವಸೂಲಿಗೆ ಇಳಿದಿದ್ದಾರೆ.

ಜಿಲ್ಲೆಯಲ್ಲಿ ಮುಷ್ಕರಕ್ಕೆ ಬೆಂಬಲಿಸುವುದಿಲ್ಲ ಎಂದು ಕಾರ್ಮಿಕರ ಸಂಘಟನೆಗಳ ನಾಯಕರು ಹೇಳಿದ್ದರು. ಇದನ್ನು ನಂಬಿ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಪರ್ಯಾಯ ಸಾರಿಗೆ ವ್ಯವಸ್ಥೆ ಅಗತ್ಯವಿಲ್ಲ ಎಂದಿದ್ದರು. ಆದರೆ ಬುಧವಾರ ಬೆಳಿಗ್ಗೆ ಚಾಲಕ- ನಿರ್ವಾಹಕರು ಬಹುತೇಕ ಎಲ್ಲಾ ಕಡೆ ಕರ್ತವ್ಯಕ್ಕೆ ಹಾಜರಾಗದೇ ಆಘಾತ ನೀಡಿದ್ದಾರೆ.

ಜಿಲ್ಲೆಯ ಬಹುತೇಕ ಎಲ್ಲೆಡೆ ಬಸ್ ಸಂಚಾರ ಕ್ಷೀಣಿಸಿದೆ. ಪರಿಣಾಮ ಖಾಸಗಿ ವಾಹನಗಳು ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣಕ್ಕೆ ಪ್ರವೇಶಿಸಿದ್ದು, ನಿಗದಿಗಿಂತ ಅಧಿಕ ಪ್ರಯಾಣ ದರ ವಿಧಿಸಿ ಪ್ರಯಾಣಿಕರನ್ನು ಕರೆದೊಯ್ಯುತ್ತಿವೆ. ಹಲವೆಡೆ ಹಣ ಕೊಟ್ಟರೂ ತಮ್ಮ ಗ್ರಾಮಗಳಿಗೆ ತೆರಳು ವಾಹನಗಳಿಲ್ಲದೇ ಪ್ರಯಾಣಿಕರು ಪರದಾಟ ನಡೆಸಿದ್ದಾರೆ.

ಇತ್ತೀಚಿನ ಸುದ್ದಿ