ಡಾ.ರಾಜ್ ಕುಮಾರ್ ಫೋಟೋ ವೈರಲ್: ಈ ಫೋಟೋ ಹಂಚಿಕೊಂಡಿದ್ದು ಯಾರು ಗೊತ್ತಾ? - Mahanayaka

ಡಾ.ರಾಜ್ ಕುಮಾರ್ ಫೋಟೋ ವೈರಲ್: ಈ ಫೋಟೋ ಹಂಚಿಕೊಂಡಿದ್ದು ಯಾರು ಗೊತ್ತಾ?

dr rajkumar
16/04/2025


Provided by

ಅಭಿಮಾನಿಗಳನ್ನ ದೇವರು ಅಂತ ಕರೆದು, ಅಭಿಮಾನಿಗಳ ಪಾಲಿಗೆ ದೇವರೇ ಆದ ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅವರ ಹುಟ್ಟುಹಬ್ಬ ಏಪ್ರಿಲ್ 24ರಂದು  ನಡೆಯಲಿದೆ. ಈಗಾಗಲೇ ಅಭಿಮಾನಿಗಳು ಹುಟ್ಟು ಹಬ್ಬ ಆಚರಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಇದೇ ಸಂದರ್ಭದಲ್ಲಿ ಡಾ.ರಾಜ್ ಕುಮಾರ್ ಅವರ ಅಪರೂಪದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ. ಈ ಅಪರೂಪದ ಫೋಟೋ ಕಂಡು ಅಭಿಮಾನಿಗಳು ಖುಷಿಪಟ್ಟಿದ್ದಾರೆ.

ಈ ಫೋಟೋವನ್ನು ಡಾ.ರಾಜ್ ಕುಮಾರ್ ಅವರ ಮೊಮ್ಮಗ, ರಾಮ್ ಕುಮಾರ್ ಪುತ್ರ ಧೀರೆನ್ ರಾಜ್ ಕುಮಾರ್ ಹಂಚಿಕೊಂಡಿದ್ದಾರೆ. ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಈ ಫೋಟೋ ಹಂಚಿಕೊಂಡಿರುವ ಅವರು, ಈ ಫೋಟೋ ತೆಗೆದಿದ್ದು ಯಾವಾಗ  ಎಂಬ ಮಾಹಿತಿ ಹಂಚಿಕೊಂಡಿದ್ದಾರೆ.

ಈ ಫೋಟೋವನ್ನು ಅಜಯ್ ಸಿನಿಮಾದ ಕಾಸ್ಟ್ಯೂಮ್ ಟ್ರಯಲ್ ವೇಳೆ ತೆಗೆಯಲಾಗಿದೆಯಂತೆ, ಅಂದಿನ ಕಾಲದ ನೋಕಿಯಾ ಫೋನ್ ನಲ್ಲಿ ಈ ಫೋಟೋ ತೆಗೆಯಲಾಗಿದೆಯಂತೆ. ಚಿಕ್ಕಮಾಮನ ಅಜಯ್ ಸಿನಿಮಾ ಕಾಸ್ಟ್ಯೂಮ್ ಟ್ರಯಲ್ ವೇಳೆ ನನ್ನ ಅಜ್ಜನ ಫೋಟೋ ಅಜ್ಜಿಯ ನೋಕಿಯಾ ಫೋನ್ ನಲ್ಲಿ ಸೆರೆ ಹಿಡಿಯಲಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ