ಭಾರತದ ಬ್ರಹ್ಮೋಸ್ ಎದುರು ಪಾಕಿಸ್ತಾನ, ಚೀನಾದ ರಕ್ಷಣಾ ವ್ಯವಸ್ಥೆಗಳು ಕಳಪೆ: ಅಮೆರಿಕ ಯುದ್ಧ ತಜ್ಞ ಜಾನ್ ಸ್ಪೆನ್ಸರ್ - Mahanayaka

ಭಾರತದ ಬ್ರಹ್ಮೋಸ್ ಎದುರು ಪಾಕಿಸ್ತಾನ, ಚೀನಾದ ರಕ್ಷಣಾ ವ್ಯವಸ್ಥೆಗಳು ಕಳಪೆ: ಅಮೆರಿಕ ಯುದ್ಧ ತಜ್ಞ ಜಾನ್ ಸ್ಪೆನ್ಸರ್

john spencer
16/05/2025

ಭಾರತದ ಬ್ರಹ್ಮೋಸ್ ಗೆ ಚೀನಾ, ಪಾಕಿಸ್ತಾನದ ವಾಯು ರಕ್ಷಣಾ ವ್ಯವಸ್ಥೆಗಳು ಸರಿಸಾಟಿಯಲ್ಲ ಎಂದು ಭಾರತದ ರಕ್ಷಣಾ ವ್ಯವಸ್ಥೆಯನ್ನು ಅಮೆರಿಕದ ನಿವೃತ್ತ ಕರ್ನಲ್, ಯುದ್ಧ ತಜ್ಞ ಜಾನ್ ಸ್ಪೆನ್ಸರ್(Colonel (Retd) John Spencer) ಕೊಂಡಾಡಿದ್ದಾರೆ.

ಮಾಧ್ಯಮವೊಂದರ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ಅವರು,  ಭಾರತ ನಡೆಸಿದ ಆಪರೇಷನ್ ಸಿಂಧೂರ್ ಬಗ್ಗೆ ಅವರು ಅಚ್ಚರಿ ವ್ಯಕ್ತಪಡಿಸಿದರಲ್ಲದೇ, ಭಾರತವು ಆಕ್ರಮಣಕಾರಿ ಮಾತ್ರವಲ್ಲ ರಕ್ಷಣಾತ್ಮಕ ತಂತ್ರಗಳಲ್ಲಿಯೂ ಶ್ರೇಷ್ಠತೆಯನ್ನು ಪ್ರದರ್ಶಿಸಿದೆ. ಪಾಕಿಸ್ತಾನದ ಯಾವುದೇ ಸ್ಥಳಕ್ಕೆ ನುಗ್ಗಿ ಯಾವುದೇ ಸಮಯದಲ್ಲಿ ದಾಳಿ ಮಾಡಬಹುದು ಎನ್ನುವ ಸಂದೇಶವನ್ನು ಭಾರತ ನೀಡಿದೆ ಎಂದು ಅವರು ತಿಳಿಸಿದ್ದಾರೆ.

ಪಾಕಿಸ್ತಾನ ಬಳಸುತ್ತಿದ್ದ ಚೀನಾದ ವಾಯು ರಕ್ಷಣಾ ವ್ಯವಸ್ಥೆ(Air Defence Systems)ಗಳು, ಭಾರತದ ಬ್ರಹ್ಮೋಸ್ ಕ್ಷಿಪಣಿಗಳಿಗೆ ಸರಿಸಾಟಿಯಲ್ಲ, ಯಾಕೆಂದರೆ, ಪಾಕಿಸ್ತಾನದ ಡ್ರೋನ್ ದಾಳಿ, ಹೈ—ಸ್ಪೀಡ್ ಕ್ಷಿಪಣಿಗಳ ಮೇಲೆ ದಾಳಿ ಮಾಡಿದ ಬ್ರಹ್ಮೋಸ್, ಭಾರತವನ್ನು ರಕ್ಷಣೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದು ಸ್ಪೆನ್ಸರ್ ಹೇಳಿದರು.

ಮಾಡರ್ನ್ ವಾರ್ ಇನ್‌ಸ್ಟಿಟ್ಯೂಟ್‌ ನಲ್ಲಿ ನಗರ ಯುದ್ಧ ಅಧ್ಯಯನಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಸ್ಪೆನ್ಸರ್, ಪಾಕಿಸ್ತಾನ ಬಳಸುತ್ತಿದ್ದ ಚೀನಾದ ವಾಯು ರಕ್ಷಣಾವನ್ನು ಭೇದಿಸುವ ಬ್ರಹ್ಮೋಸ್ ಕ್ಷಿಪಣಿಯ ಸಾಮರ್ಥ್ಯವು ಭಾರತದ ಮುಂದುವರಿದ ಮಿಲಿಟರಿ ಸಾಮರ್ಥ್ಯಗಳಿಗೆ ಸಾಕ್ಷಿಯಾಗಿದೆ ಎಂದು ಒತ್ತಿ ಹೇಳಿದ್ದಾರೆ.

ಚೀನಾದ ವಾಯು ರಕ್ಷಣಾ ವ್ಯವಸ್ಥೆಗಳು ಮತ್ತು ಕ್ಷಿಪಣಿಗಳು ಭಾರತದ ವ್ಯವಸ್ಥೆಗಳಿಗೆ ಹೋಲಿಸಿದರೆ ಕಳಪೆಯಾಗಿವೆ. ಭಾರತದ ಬ್ರಹ್ಮೋಸ್ ಕ್ಷಿಪಣಿಯು ಚೀನಾ ಮತ್ತು ಪಾಕಿಸ್ತಾನದ ವಾಯು ರಕ್ಷಣಾ ವ್ಯವಸ್ಥೆಗಳನ್ನು ಭೇದಿಸುವಲ್ಲಿ ಯಶಸ್ವಿಯಾಯಿತು. ಭಾರತದ ಸಂದೇಶ ಸ್ಪಷ್ಟವಾಗಿತ್ತು. ಅದು ಪಾಕಿಸ್ತಾನದ ಯಾವುದೇ ಪ್ರದೇಶದ ಮೇಲೆ ಯಾವಾಗ ಬೇಕಾದರೂ ದಾಳಿ ಮಾಡಬಹುದು” ಎಂದು ಸ್ಪೆನ್ಸರ್ ಹೇಳಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ