ಚಿಕ್ಕಮಗಳೂರಿನಲ್ಲಿ ಬೃಹತ್ ಬಾವುಟದೊಂದಿಗೆ ತಿರಂಗಾ ಯಾತ್ರೆ

ಚಿಕ್ಕಮಗಳೂರು: ಆಪರೇಷನ್ ಸಿಂಧೂರ, ಸೈನಿಕರ ಬೆಂಬಲಿಸಿ ಚಿಕ್ಕಮಗಳೂರು ನಗರದಲ್ಲಿ ಬೃಹತ್ ಬಾವುಟದೊಂದಿಗೆ ತಿರಂಗಾ ಯಾತ್ರೆ ನಡೆಸಲಾಯಿತು.
1000 ಅಡಿಯ ಬಾವುಟ ಹಿಡಿದು ಬೃಹತ್ ಮೆರವಣಿಗೆ ನಡೆಸಲಾಯಿತು. ಪರಿಷತ್ ಸದಸ್ಯ ಸಿ.ಟಿ.ರವಿ ಸೇರಿದಂತೆ ಇತರ ನಾಯಕರು ಬಾವುಟ ಹಿಡಿದು ರಸ್ತೆಯಲ್ಲಿ ಸಾಗಿದರು.
ಓಂಕಾರೇಶ್ವರ ದೇಗುಲದಿಂದ ಎಂ.ಜಿ.ರಸ್ತೆ ಮೂಲಕ ಆಜಾದ್ ಪಾರ್ಕ್ ವೃತ್ತದವರೆಗೆ ಮೆರವಣಿಗೆ ನಡೆಸಲಾಯಿತು. ಈ ತಿರಂಗಾ ಯಾತ್ರೆಯಲ್ಲಿ 2000ಕ್ಕೂ ಹೆಚ್ಚು ಜನಸಾಮಾನ್ಯರು ಭಾಗಿಯಾಗಿ ಬೆಂಬಲ ಸೂಚಿಸಿದರು.
ತಿರಂಗಾ ಯಾತ್ರೆಯ ಮೆರವಣಿಗೆ ಹತ್ತಾರು ಮಾಜಿ ಸೈನಿಕರು ಭಾಗಿಯಾಗಿದ್ದರು. ರಾಷ್ಟ್ರಭಕ್ತಿ ಗೀತೆಗಳ ಮೂಲಕ ಬೃಹತ್ ಮೆರವಣಿಗೆ ಸಾಗಿತು. ಚಿಕ್ಕಮಗಳೂರು ನಗರದ ಆಜಾದ್ ಪಾರ್ಕ್ ನಲ್ಲಿ ಮೆರವಣಿಗೆ ಮುಕ್ತಾಯವಾಯಿತು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD