ತಾನೇ ಡ್ರೈವ್ ಮಾಡುತ್ತಾ, ಕುಟುಂಬದ 7 ಸದಸ್ಯರನ್ನು ಲಡಾಖ್ ಗೆ ಪ್ರವಾಸಕ್ಕೆ ಕರೆದೊಯ್ಯುತ್ತಿರುವ ಕೇರಳದ ಮಹಿಳೆ! - Mahanayaka

ತಾನೇ ಡ್ರೈವ್ ಮಾಡುತ್ತಾ, ಕುಟುಂಬದ 7 ಸದಸ್ಯರನ್ನು ಲಡಾಖ್ ಗೆ ಪ್ರವಾಸಕ್ಕೆ ಕರೆದೊಯ್ಯುತ್ತಿರುವ ಕೇರಳದ ಮಹಿಳೆ!

woman drives caravan to ladakh
16/05/2025

ಕೇರಳದ ಮಹಿಳೆಯೊಬ್ಬರು ತಮ್ಮ 7 ಸದಸ್ಯರ ಕುಟುಂಬದೊಂದಿಗೆ ಕ್ಯಾರವಾನ್ ನಲ್ಲಿ ಲಡಾಖ್ ಗೆ ಪ್ರವಾಸ ಆರಂಭಿಸಿದ್ದಾರೆ. ತಮ್ಮ ಕುಟುಂಬದ 3 ವರ್ಷದ ಮಗು ಸೇರಿದಂತೆ ಒಟ್ಟು ಏಳು ಜನರನ್ನು ಕರೆದುಕೊಂಡು ಲಡಾಖ್ ಪ್ರವಾಸ ಆರಂಭಿಸಿದ್ದು, ತಮ್ಮ ಪ್ರವಾಸದ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.

ಪುಥೆಟ್ಟು ಟ್ರಾವೆಲ್ ವ್ಲಾಗ್‌(Puthettu Travel Vlog) ಎಂಬ ಇನ್ ಸ್ಟಾಗ್ರಾಮ್  ಚಾನೆಲ್ ನಲ್ಲಿ ತಮ್ಮ ಟ್ರಾವೆಲ್ ವ್ಲಾಗ್ ನ್ನು ಅವರು ಹಂಚಿಕೊಂಡಿದ್ದಾರೆ. “ ನಾವು ಕೇರಳದಿಂದ ಲಡಾಖ್ ಪ್ರವಾಸ ಆರಂಭಿಸಿದ್ದೇವೆ. ಈ ಪ್ರವಾಸದಲ್ಲಿ 18 ರಾಜ್ಯಗಳನ್ನು ಸುತ್ತುತ್ತೇವೆ ಎಂದು ಕ್ಯಾರವಾನ್ ನ್ನು ಸ್ವತಃ ಚಾಲನೆ ಮಾಡುತ್ತಾ ಮಹಿಳೆ ಮಾಹಿತಿ ನೀಡುತ್ತಾರೆ.

ಊಟ ಮಾಡುವುದು, ಕ್ಯಾರವಾನ್ ಸ್ವಚ್ಛಗೊಳಿಸುವುದು, ಚಾಟ್ ಮಾಡುವುದು, ವೈವಿಧ್ಯಮಯ ಪ್ರದೇಶಗಳನ್ನು ತೋರಿಸುವುದು, ಪ್ರಯಾಣವನ್ನು ಎಂಜಾಯ್ ಮಾಡುವುದು ಮೊದಲಾದ ವಿಡಿಯೋಗಳನ್ನು ಪುಥೆಟ್ಟು ಟ್ರಾವೆಲ್ ವ್ಲಾಗ್‌ ನಲ್ಲಿ ಹಂಚಿಕೊಳ್ಳಲಾಗಿದೆ.

ದಿನನಿತ್ಯ ಜೀವನದ ಜಂಜಾಟದಲ್ಲೇ ಬಹಳಷ್ಟು ಜನರು ತೊಡಗಿ ಕೊಂಡು ಜೀವನೋತ್ಸಾಹವನ್ನು ಕಳೆದುಕೊಳ್ಳುತ್ತಾರೆ. ನಿಮ್ಮ ಕುಟುಂಬದ ಜೊತೆಗೆ ಒಮ್ಮೆಯಾದರೂ ಯಾವುದಾದರೂ ಸುಂದರ ಪ್ರದೇಶಗಳಿಗೆ ಭೇಟಿ ನೀಡಿ, ಸಮಯ ಕಳೆಯಿರಿ, ನಿಮ್ಮ ಜೀವನದಲ್ಲಿ ಹೊಸ ಉತ್ಸಾಹವನ್ನು ಉಂಟು ಮಾಡುತ್ತದೆ. ಕುಟುಂಬದ ಜೊತೆಗೆ, ಸ್ನೇಹಿತರ ಜೊತೆಗೆ ಪ್ರವಾಸಕ್ಕೆ ತೆರಳುವುದು ಬಾಂಧವ್ಯ ಬೆಸುಗೆಗೆ ಸಹಕಾರಿಯಾಗಲಿದೆ. ಮನೆಯಲ್ಲಿ ಮನಃಶಾಂತಿ ಮೂಡಲು ಸಾಧ್ಯವಾಗುತ್ತದೆ. ಪುಥೆಟ್ಟು ಟ್ರಾವೆಲ್ ವ್ಲಾಗ್‌ ಕುಟುಂಬವು ಆರಂಭಿಸಿರುವ ಪ್ರವಾಸ ಹಲವಾರು ಜನರಲ್ಲಿ ಪ್ರವಾಸದ ಬಗ್ಗೆ ಆಸಕ್ತಿಯನ್ನು ಮೂಡಿಸಲು ಕಾರಣವಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ