ಮೈಸೂರು ಸ್ಯಾಂಡಲ್ ಸೋಪ್: ತಮನ್ನಾನು ಬೇಡ, ಸುಮನ್ನಾನು ಬೇಡ ನಾನೇ ರಾಯಭಾರಿ ಆಗ್ತೀನಿ: ವಾಟಾಳ್ ನಾಗರಾಜ್ - Mahanayaka
8:46 PM Wednesday 10 - December 2025

ಮೈಸೂರು ಸ್ಯಾಂಡಲ್ ಸೋಪ್: ತಮನ್ನಾನು ಬೇಡ, ಸುಮನ್ನಾನು ಬೇಡ ನಾನೇ ರಾಯಭಾರಿ ಆಗ್ತೀನಿ: ವಾಟಾಳ್ ನಾಗರಾಜ್

tamanna bhatia
23/05/2025

ರಾಮನಗರ: ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿ ವಿಚಾರವಾಗಿ ಸಾಕಷ್ಟು ವಿವಾದಗಳು ಎದ್ದಿವೆ. ಈ ನಡುವೆ ಈ ವಿಚಾರಕ್ಕೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಎಂಟ್ರಿಯಾಗಿದ್ದಾರೆ.

ರಾಮನಗರದಲ್ಲಿ ಮಾತನಾಡಿದ ಅವರು, ಮೈಸೂರು ಸ್ಯಾಂಡಲ್ ಸೋಪಿಗೆ ತಮನ್ನಾನು ಬೇಡ, ಸುಮನ್ನಾನು ಬೇಡ ನಾನೇ ರಾಯಭಾರಿ ಆಗ್ತೀನಿ, ತಮಿಳು, ತೆಲುಗಿನವರು ಯಾರೂ ಬೇಡ ಎಂದಿದ್ದಾರೆ.

ಶ್ರೀಗಂಧ, ಮೈಸೂರು ಇವೆರಡೂ ಸಹ ಪ್ರಪಂಚದಲ್ಲೇ ಬ್ರಾಂಡ್. ಸಿಎಂ, ಡಿಸಿಎಂ, ಸೇರಿದಂತೆ ರಾಜ್ಯದ ಎಲ್ಲಾ ಮಂತ್ರಿಗಳು, ಶಾಸಕರು, ಸರ್ಕಾರಿ ಅಧಿಕಾರಿಗಳು ಸ್ಯಾಂಡಲ್ ಸೋಪಿನಲ್ಲಿ ಸ್ನಾನ ಮಾಡಲಿ. ಇವರೆಲ್ಲಾ ಸ್ಯಾಂಡಲ್ ಸೋಪಿನಲ್ಲಿ ಸ್ನಾನ ಮಾಡಿದ್ರೆ ಅದೇ ದೊಡ್ಡ ರಾಯಭಾರಿ ಎಂದು ವಾಟಾಳ್ ಹೇಳಿದ್ದಾರೆ.

ತಮನ್ನಾಗೆ 6.20 ಕೋಟಿ ರೂ. ಕೊಟ್ಟಿರೋದರಲ್ಲಿ ದೊಡ್ಡ ರಾಜಕೀಯ ಇದೆ ಎಂದು ವಾಟಾಳ್ ನಾಗರಾಜ್ ಅನುಮಾನು ವ್ಯಕ್ತಪಡಿಸಿದ್ದಾರೆ. ನಾನೇ ಫ್ರೀಯಾಗಿ ರಾಯಭಾರಿ ಆಗ್ತೀನಿ ಎಂದು ವಾಟಾಳ್ ಹೇಳಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ