ಮಳೆಗೆ ಕುಸಿದು ಬಿದ್ದ ಮನೆಯ ಗೋಡೆ: 3 ವರ್ಷದ ಮಗು ದಾರುಣ ಸಾವು - Mahanayaka

ಮಳೆಗೆ ಕುಸಿದು ಬಿದ್ದ ಮನೆಯ ಗೋಡೆ: 3 ವರ್ಷದ ಮಗು ದಾರುಣ ಸಾವು

belagavi
26/05/2025


Provided by

ಬೆಳಗಾವಿ : ಧಾರಾಕಾರ ಮಳೆಗೆ ಮನೆಯ ಗೋಡೆ ಕುಸಿದು ಬಿದ್ದ ಪರಿಣಾಮ 3 ವರ್ಷದ ಬಾಲಕಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ, ಗೋಕಾಕ್ ನಗರದ, ಮಹಲಿಂಗೇಶ್ವರ ಕಾಲೋನಿಯಲ್ಲಿ ನಡೆದಿದೆ.

ಕೀರ್ತಿಲಾ ನಾಗೇಶ್​ ಪೂಜಾರಿ ಎಂಬ ಮಗು ಸಾವನ್ನಪ್ಪಿದ ಮಗುವಾಗಿದೆ. ಮೂರು ವರ್ಷದ ಮಗು ಮತ್ತು ಆಕೆಯ ಅಕ್ಕ ರೂಮಿನಲ್ಲಿ ಮಲಗಿದ್ದರು. ಈ ವೇಳೆ ರಾತ್ರಿ ಇಡಿ ಸುರಿದ ಮಳೆಗೆ ಮನೆಯ ಗೋಡೆ ನೆನೆದು ಬೆಳಗಿನ ಜಾವ ಕುಸಿದು ಬಿದ್ದಿದೆ. ಗೋಡೆ ಕುಸಿದ ಪರಿಣಾಮ ಮೂರು ವರ್ಷದ ಕೀರ್ತಿಲಾ ನಾಗೇಶ್​ ಪೂಜಾರಿ ಸಾವನ್ನಪ್ಪಿದ್ದು. ಆಕೆಯ 4 ವರ್ಷದ ಅಕ್ಕನಿಗೆ ಗಾಯವಾಗಿದೆ.

ಪಕ್ಕದ ರೂಮಿನಲ್ಲಿ ಮಲಗಿದ್ದ ತಂದೆ-ತಾಯಿ ಅಪಾಯದಿಂದ ಪಾರಾಗಿದ್ದು. ಬಾಲಕಿ ಶವವನ್ನು ಗೋಕಾಕ್​ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ಶಿಫ್ಟ್​ ಮಾಡಲಾಗಿದೆ. ಇನ್ನು ಘಟನಾ ಸ್ಥಳಕ್ಕೆ ಗೋಕಾಕ್​ ಶಹರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ