2 ಮಕ್ಕಳಾದ ಮೇಲೆ ಶುರುವಾಯ್ತು 2ನೇ ಲವ್: ಲವರ್ ಜೊತೆ ಸೇರಿ ಪತಿಯ ಬರ್ಬರ ಹತ್ಯೆ!

ಚಿಕ್ಕಮಗಳೂರು: ಲವ್ ಮ್ಯಾರೇಜ್ ಆಗಿ 2 ಮಕ್ಕಳಾದ ಬಳಿಕ ಮತ್ತೊಂದು ಲವ್, ಆಫ್ಟರ್ ಮ್ಯಾರೇಜ್ ಲವರ್ ಜೊತೆ ಸೇರಲು ಫಸ್ಟ್ ಲವರ್ ಕಂ ಗಂಡನ ಕೊಲೆ ನಡೆಸಿರುವ ಘಟನೆಯೊಂದು ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಕರಗುಂದ ಬಳಿ ನಡೆದಿದೆ.
ಸುದರ್ಶನ್ (35) ಮೃತ ದುರ್ದೈವಿಯಾಗಿದ್ದು, ಕಮಲ ತನ್ನ ಹೊಸ ಲವರ್ ಜೊತೆ ಸೇರಿಕೊಂಡು ಗಂಡನನ್ನೇ ಮುಗಿಸಿದ ಮಹಿಳೆಯಾಗಿದ್ದಾಳೆ.
10 ವರ್ಷಗಳ ಹಿಂದೆ ಕಮಲಗೆ ಸುದರ್ಶನ್ ಜೊತೆಗೆ ಲವ್ ಮ್ಯಾರೇಜ್ ಆಗಿತ್ತು. ಇದರಲ್ಲಿ ಇಬ್ಬರು ಮಕ್ಕಳು ಕೂಡ ಇದ್ದರು. 2 ಮಕ್ಕಳಾದ ಬಳಿಕ ಕಮಲಾಳಿಗೆ ಶಿವರಾಜ್ ಎಂಬವನ ಜೊತೆಗೆ ಮತ್ತೆ ಲವ್ ಆಗಿದೆ.
ಹೀಗಾಗಿ ಲವರ್ ಜೊತೆಗೆ ಸೇರಲು ಅಡ್ಡಿಯಾಗುತ್ತಿದ್ದ ಗಂಡನನ್ನು ಕೊಲ್ಲಲು ಪ್ಲಾನ್ ಮಾಡಲಾಗಿದ್ದು, ಅಂತೆಯೇ ಮದ್ಯದಲ್ಲಿ ನಿದ್ದೆ ಮಾತ್ರೆ ಹಾಕಿ, ಆತನನ್ನು ಕತ್ತು ಹಿಸುಕಿ ಕೊಲೆ ಮಾಡಿ ಶವವನ್ನ ಕರಗುಂದ ಬಸ್ ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದರು.
ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪತಿಯ ಕೊಲೆಯ ಬಗ್ಗೆ ಕಮಲಾ ದೂರು ನೀಡಿದ್ದಳು. ಇದರ ಆಧಾರದಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಎನ್.ಆರ್.ಪುರ ಪೊಲೀಸರು ಪತ್ನಿಯನ್ನು ವಿಚಾರಿಸಿದಾಗ ಆಕೆಯೇ ಹಂತಕಿ ಎನ್ನುವುದು ತಿಳಿದು ಬಂದಿತ್ತು. ಸದ್ಯ ಕಮಲಾ ಸೇರಿದಂತೆ ಒಟ್ಟು ಮೂವರನ್ನು ಬಂಧಿಸಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: