ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಮಳೆ ಅಬ್ಬರ: ರೆಡ್ ಅಲರ್ಟ್ - Mahanayaka

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಮಳೆ ಅಬ್ಬರ: ರೆಡ್ ಅಲರ್ಟ್

rain
26/05/2025

ಮಂಗಳೂರು: ಮುಂಗಾರು ಮಳೆ ಕರ್ನಾಟಕದ ಕರಾವಳಿ ಭಾಗದಲ್ಲಿ ಅಬ್ಬರಿಸುತ್ತಿದ್ದು, ಮಂಗಳೂರು ಸೇರಿದಂತೆ ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ.

ಹವಾಮಾನ ಇಲಾಖೆ ಮಾಹಿತಿ ಪ್ರಕಾರ, ಮುಂದಿನ ಎರಡು ದಿನಗಳ ಕಾಲ ಮಂಗಳೂರು ಸೇರಿದಂತೆ ಕರ್ನಾಟಕದ ಕರಾವಳಿಯಲ್ಲಿ ಮಳೆ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಇನ್ನೂ ಕರಾವಳಿ ಸೌಂದರ್ಯ ಸವಿಯಲು ಬಂದ ಪ್ರವಾಸಿಗರೂ ಕಷ್ಟ ಅನುಭವಿಸುತ್ತಿದ್ದಾರೆ. ಹವಾಮಾನ ಇಲಾಖೆಯು 5 ದಿನ ರೆಡ್ ಅಲರ್ಟ್​​ ಘೋಷಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮಳೆ ವಿವರ:

ಸುಳ್ಯ ಬೆಳ್ಳಾರೆ: 200.5 ಮಿ.ಮೀ., ಬಂಟ್ವಾಳ ಸರಪಾಡಿ: 190 ಮಿ.ಮೀ,  ಪುತ್ತೂರು ಬೆಳಂದೂರು: 190 ಮಿ.ಮೀ,  ಪುತ್ತೂರು ಅಲಂಕಾರು: 178.5 ಮಿ.ಮೀ,  ಪುತ್ತೂರು ರಾಮಕುಂಜ: 172.5 ಮಿ.ಮೀ,  ಪುತ್ತೂರು ಬಡಗನ್ನೂರು: 167.5 ಮಿ.ಮೀ,  ಬಂಟ್ವಾಳ ಪುಣಚ: 166 ಮಿ.ಮೀ,  ಸುಳ್ಯ ಗುತ್ತಿಗಾರು: 165.5 ಮಿ.ಮೀ,  ಪುತ್ತೂರು ಅರಿಯಡ್ಕ: 164 ಮಿ.ಮೀ,  ಬಂಟ್ವಾಳ ಕಾವಳಮೂಡೂರು: 163 ಮಿ.ಮೀ,  ಬೆಳ್ತಂಗಡಿ ಮಾಲವಂತಿಗೆ: 161.5 ಮಿ.ಮೀ, ಬಂಟ್ವಾಳ ಕೇಪು: 158.5 ಮಿ.ಮೀ, ಬೆಳ್ತಂಗಡಿ ಬಾರ್ಯ: 155 ಮಿ.ಮೀ, ಪಡುಮರ್ನಾಡ್: 151.5 ಮಿ.ಮೀ, ಶಿರಾಡಿ: 151.5 ಮಿ.ಮೀ.

ದಕ್ಷಿಣ ಕನ್ನಡ ಜಿಲ್ಲಾದ್ಯಂತ ವ್ಯಾಪಕ ಮಳೆ ಆಗುತ್ತಿರುವುದರಿಂದ ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣಾ ತಂಡಗಳು ಆಗಮಿಸಲಿವೆ ಎಂದು ಪ್ರಭಾರ ಜಿಲ್ಲಾಧಿಕಾರಿ ಡಾ.ಕೆ.ಆನಂದ್ ತಿಳಿಸಿದ್ದಾರೆ. ಭಾನುವಾರ ಜಿಲ್ಲೆಯ ಮಳೆ ಪರಿಸ್ಥಿತಿ ಬಗ್ಗೆ ಅಧಿಕಾರಿಗಳೊಂದಿಗೆ ಆನ್​ ಲೈನ್ ಸಭೆ ನಡೆಸಿ ಅವರು ಮಾತನಾಡಿದರು.

ರಾಷ್ಟ್ರೀಯ ವಿಪತ್ತು ದಳದ (ಎನ್ ​​ಡಿಆರ್ ​​ಎಫ್) ಒಂದು ತಂಡ ಆಗಮಿಸಲಿದ್ದು, ಅದನ್ನು ಪುತ್ತೂರಿನಲ್ಲಿ ನಿಯೋಜಿಲಾಗುವುದು. ರಾಜ್ಯ ವಿಪತ್ತು ದಳದ (ಎಸ್ ​​ಡಿಆರ್​​ ಎಫ್) ಎರಡು ತಂಡಗಳು ಮಂಗಳೂರು ಹಾಗೂ ಸುಬ್ರಹ್ಮಣ್ಯದಲ್ಲಿ ಕಾರ್ಯಾಚರಣೆಯಲ್ಲಿರಲಿವೆ. ಈಗಾಗಲೇ ಒಂದು ಎಸ್​​ಡಿಆರ್ ​​ಎಫ್ ತಂಡ ಆಗಮಿಸಿದೆ ಎಂದು ತಿಳಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ