ದೇವರಮನೆಗುಡ್ಡದಲ್ಲಿ ರಸ್ತೆಯಲ್ಲೇ ಬರ್ತ್ ಡೇ: ಬರ್ತ್ ಡೇ ಬಾಯ್ ಸೇರಿ 9 ಜನರ ವಿರುದ್ಧ ಪ್ರಕರಣ

ಚಿಕ್ಕಮಗಳೂರು: ನೋಡಿ…ನೋಡಿ… ಇದು ಹುಟ್ಟು ಹಬ್ಬ ಆಚರಿಸಿಕೊಳ್ಳೋ ರೀತಿನಾ…? ತಲೆ–ಮುಖದ ತುಂಬಾ ಕೇಕ್ ಮೆತ್ತಿಕೊಂಡು ನಡುರಸ್ತೆಯಲ್ಲಿ ಹುಚ್ಚಾಟ, ಸ್ಪೆಷಲ್ ಬರ್ತ್ ಡೇ ಮಾಡ್ತಿದ್ದವರಿಗೆ ಕಾಫಿನಾಡ ಪೊಲೀಸರಿಂದ ಸ್ಪೆಷಲ್ ಟ್ರೀಟ್ಮೆಂಟ್ ಸಿಕ್ಕಿದೆ.
ಹೌದು.. ಪ್ರಸಿದ್ಧ ಪ್ರವಾಸಿತಾಣ ದೇವರಮನೆಗುಡ್ಡ ಕಿರಿದಾದ ರಸ್ತೆಯಲ್ಲೇ ಪ್ರವಾಸಿಗರು ಹುಟ್ಟು ಹಬ್ಬ ಆಚರಿಸಿದ್ದು, ಇದೇ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಪೊಲೀಸರು ಬರ್ತ್ ಡೇ ಬಾಯ್ ಸೇರಿ 9 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಮೂಡಿಗೆರೆ ತಾಲೂಕಿನ ಬಣಕಲ್ ಪೊಲೀಸರಿಂದ ಪಬ್ಲಿಕ್ ನ್ಯೂಸೆನ್ಸ್ ಬಾಯ್ಸ್ ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಪ್ರಸಿದ್ಧ ಪ್ರವಾಸಿತಾಣ ದೇವರಮನೆಗುಡ್ಡ ರಸ್ತೆಯಲ್ಲಿ 9 ಜನರಿಂದ ಬರ್ತ್ ಡೇ ಆಚರಣೆ ನಡೆದಿದೆ. ಈ ದೇವರಮನೆಗುಡ್ಡ ಕಿರಿದಾರ ರಸ್ತೆ, ಕಾಡು, ನಿರ್ಜನ ಪ್ರದೇಶದ ಸ್ಥಳವಾಗಿದೆ. ಬರ್ತಡೇ ಹಿನ್ನೆಲೆ ಮದ್ಯ ಸೇವಿಸಿ, ಮೋಜು–ಮಸ್ತಿ ವೇಳೆ ಅನಾಹುತವಾದ್ರೆ ಹೊಣೆ ಯಾರು..? ಎಂದು ಪೊಲೀಸರು ತರಾಟೆಗೆತ್ತಿಕೊಂಡಿದ್ದಾರೆ.
ಕಿರಿದಾದ ರಸ್ತೆಯಲ್ಲಿ ಸ್ವಲ್ಪ ಯಾಮಾರಿದ್ರು ಕಾರು ಪ್ರಪಾತ ಸೇರೋದು ಗ್ಯಾರಂಟಿಯಾಗಿದೆ, ಈ ಸ್ಥಳದಲ್ಲಿ ಬರ್ತ್ ಡೇ ಆಚರಿಸುತ್ತಿದ್ದ ಯುವಕರಿಗೆ ಪೊಲೀಸರು ತರಾಟೆಗೆತ್ತಿಕೊಂಡಿದ್ದು, 9 ಜನರ ಮೇಲೂ ಪ್ರಕರಣ ದಾಖಲು ದಾಖಲಿಸಿದ್ದಾರೆ.
9 ಜನ ಯುವಕರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಮೂಲದವರು ಎಂದು ತಿಳಿದು ಬಂದಿದೆ. ಸಾಕಷ್ಟು ದಿನಗಳಿಂದಲೂ ಈ ಭಾಗದಲ್ಲಿ ಪ್ರವಾಸಿಗರ ಹುಚ್ಚಾಟಕ್ಕೆ ಬ್ರೇಕ್ ಹಾಕಬೇಕು ಎನ್ನುವ ಒತ್ತಾಯಗಳು ಕೇಳಿ ಬರುತ್ತಿತ್ತು. ಇದೀಗ ಬಣಕಲ್ ಪೊಲೀಸರ ಕಾರ್ಯಕ್ಕೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: