ಚಿಕ್ಕಮಗಳೂರಿನಲ್ಲೂ ಗಡಿಪಾರು ಆದೇಶ: ನಾಲ್ವರ ವಿರುದ್ಧ ಗಡಿಪಾರು ಆದೇಶ - Mahanayaka

ಚಿಕ್ಕಮಗಳೂರಿನಲ್ಲೂ ಗಡಿಪಾರು ಆದೇಶ: ನಾಲ್ವರ ವಿರುದ್ಧ ಗಡಿಪಾರು ಆದೇಶ

police
03/06/2025


Provided by

ಚಿಕ್ಕಮಗಳೂರು:  ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ಹಾಗೂ ತರೀಕೆರೆ ತಾಲೂಕಿನಲ್ಲಿ ನಾಲ್ವರ ಗಡಿಪಾರಿಗೆ ಆದೇಶ ಮಾಡಲಾಗಿದೆ.

ಮೂವರು ಎನ್.ಆರ್.ಪುರದವರು ಮತ್ತು ಒಬ್ಬ ತರೀಕೆರೆ ಮೂಲದ ವ್ಯಕ್ತಿ ಸೇರಿ ಒಟ್ಟು ನಾಲ್ವರ ಗಡಿಪಾರು ಮಾಡಲು ಆದೇಶಿಸಲಾಗಿದೆ.

ಫೈಜುಲ್ಲಾ ಷರೀಫ್, ಪ್ರದೀಪ್, ಮನೋರಂಜನ್ ಹಾಗೂ ಮೌಂಟ್ ಬ್ಯಾಟನ್ ಆರೋಗ್ಯ ಸ್ವಾಮಿ ನಾಲ್ವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿ ಮೀನಾ ನಾಗರಾಜ್  ಜೊತೆ ಚರ್ಚಿಸಿ ಎಸ್ಪಿ ವಿಕ್ರಂ ಆದೇಶ ಹೊರಡಿಸಿದ್ದಾರೆ.

ಕಾನೂನು ಬಾಹಿರ ಚಟುವಟಿಕೆ, ನೈತಿಕ ಪೊಲೀಸ್ ಗಿರಿ, ಸುಳ್ಳು ಸುದ್ದಿ ಹಬ್ಬಿಸೋದು, ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತವರಿಗೆ ಎಚ್ಚರಿಕೆ ನೀಡಲಾಗಿದೆ. ಅಂತವರ ವಿರುದ್ಧವೂ ಗಡಿಪಾರಿಗೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ