ಚಾರ್ಮಾಡಿ ಘಾಟಿಯಲ್ಲಿ ಉರುಳಿ ಬಿದ್ದ ಬೃಹತ್ ಮರ: 3 ಕಿ.ಮೀ. ಟ್ರಾಫಿಕ್ ಜಾಮ್ - Mahanayaka

ಚಾರ್ಮಾಡಿ ಘಾಟಿಯಲ್ಲಿ ಉರುಳಿ ಬಿದ್ದ ಬೃಹತ್ ಮರ: 3 ಕಿ.ಮೀ. ಟ್ರಾಫಿಕ್ ಜಾಮ್

charmadighat
02/06/2025

ಚಿಕ್ಕಮಗಳೂರು:   ಚಾರ್ಮಾಡಿ ಘಾಟಿಯಲ್ಲಿ ಭಾರೀ ಗಾಳಿ ಹಿನ್ನೆಲೆ ಬೃಹತ್ ಮರವೊಂದು ಧರೆಗುರುಳಿದ್ದು, ಪರಿಣಾಮವಾಗಿ  3 ಕಿ.ಮೀ. ಟ್ರಾಫಿಕ್ ಜಾಮ್ ಉಂಟಾಗಿದೆ.

ಚಾರ್ಮಾಡಿ ಘಾಟ್ ನ  ಮೂರನೇ ತಿರುವಿನ ಸಮೀಪ ಮರ ಬಿದ್ದಿದೆ. ಚಿಕ್ಕಮಗಳೂರು–ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟ್ ನ   ಎರಡೂ ಮಾರ್ಗದಲ್ಲೂ 3 ಕಿ.ಮೀ. ಸಾಲಾಗಿ ವಾಹನಗಳು ನಿಂತಿವೆ.

ಸುಮಾರು ಒಂದು ಗಂಟೆ ಬಳಿಕ ಸ್ಥಳಕ್ಕೆ ಹೋದ ಜೆಸಿಬಿಯಿಂದ ತೆರವು ಕಾರ್ಯ ನಡೆಯಿತು. ವಾಹನ ಸವಾರರು ಎಚ್ಚರಿಕೆಯಿಂದ ಚಾಲನೆ ಮಾಡುವಂತೆ ಪೊಲೀಸರು, ಸ್ಥಳೀಯರು ಮನವಿ ಮಾಡಿಕೊಂಡಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ  ಬಣಕಲ್ ಪೊಲೀಸರು ಮತ್ತು ಸ್ಥಳೀಯರು ಮರ ತೆರವು ಕಾರ್ಯಾಚರಣೆ ನಡೆಸಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

<

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ