ಭಾರೀ ಗಾಳಿ-ಮಳೆಗೆ ಮರ ಬಿದ್ದು ಬೈಕ್ ಸವಾರ ಸಾವು - Mahanayaka
2:34 AM Saturday 18 - October 2025

ಭಾರೀ ಗಾಳಿ–ಮಳೆಗೆ ಮರ ಬಿದ್ದು ಬೈಕ್ ಸವಾರ ಸಾವು

chikkamagaluru crime news
16/06/2025

ಚಿಕ್ಕಮಗಳೂರು:  ಭಾರೀ ಗಾಳಿ–ಮಳೆಗೆ ಮರ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಎನ್.ಆರ್.ಪುರ (N.R.Pura)ತಾಲೂಕಿನ ಎಲೆಕಲ್ ಘಾಟಿಯಲ್ಲಿ ನಡೆದಿದೆ.


Provided by

ಅನಿಲ್ (55) ಮೃತ ದುರ್ದೈವಿ.  ಮರ ಬಿದ್ದ ಕೂಡಲೇ ಬಾಳೆಹೊನ್ನೂರು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದರೂ, ಬೈಕ್ ಸವಾರನ ಜೀವ ಉಳಿಸಲು ಸಾಧ್ಯವಾಗಲಿಲ್ಲ.

ಘಟನೆ ನಡೆದ ಕೂಡಲೇ  ಆಂಬುಲೆನ್ಸ್ ಬರೋದು ತಡವಾಗುತ್ತೆಂದು ಅಗ್ನಿಶಾಮಕ ವಾಹನದಲ್ಲಿ ಆಸ್ಪತ್ರೆಗೆ ರವಾನೆ ಮಾಡಲಾಯಿತು. ಆದರೆ, ತೀವ್ರ ಗಾಯಗೊಂಡಿದ್ದ ಅನಿಲ್ ಆಸ್ಪತ್ರೆ ಕೊಂಡೊಯ್ಯುವ ಮಾರ್ಗ  ಮಧ್ಯೆ ಸಾವನ್ನಪ್ಪಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕು, ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ