ಸುದ್ದಿ ಓದುತ್ತಿದ್ದ ವೇಳೆಯೇ ಇರಾನ್ ನ ನ್ಯೂಸ್ ಚಾನೆಲ್ ಮೇಲೆ ದಾಳಿ ನಡೆಸಿದ ಇಸ್ರೇಲ್! - Mahanayaka

ಸುದ್ದಿ ಓದುತ್ತಿದ್ದ ವೇಳೆಯೇ ಇರಾನ್ ನ ನ್ಯೂಸ್ ಚಾನೆಲ್ ಮೇಲೆ ದಾಳಿ ನಡೆಸಿದ ಇಸ್ರೇಲ್!

iran broadcasting
17/06/2025

ಟೆಹ್ರಾನ್‌: ಐಆರ್‌ ಐಬಿ ನಿರೂಪಕಿಯೊಬ್ಬರು ಇಸ್ರೇಲ್‌ ದಾಳಿ ಕುರಿತಂತೆ ಸುದ್ದಿ ಓದುತ್ತಿರುವ ವೇಳೆಯೇ ಬಾಂಬ್ ದಾಳಿ ನಡೆದಿರುವ ಘಟನೆ ಇರಾನ್ ನ ರಾಜಧಾನಿ ಟೆಹ್ರಾನ್ ನಲ್ಲಿ ನಡೆದಿದ್ದು, ಇರಾನ್ ನ ಸರ್ಕಾರಿ ಟಿವಿ ಕಚೇರಿ ಮೇಲೆಯೇ ದಾಳಿ ನಡೆಸಲಾಗಿದೆ.

ಐಆರ್‌ಐಬಿ ನಿರೂಪಕಿಯೊಬ್ಬರು ಇಸ್ರೇಲ್‌ ದಾಳಿ ಕುರಿತಂತೆ ಸುದ್ದಿ ಓದುತ್ತಿದ್ದರು. ಈ ಸಂದರ್ಭದಲ್ಲೇ ಇಸ್ರೇಲ್‌ ಐಆರ್‌ಬಿ ಕಟ್ಟಡದ ಮೇಲೆಯೇ ಇಸ್ರೇಲ್‌ ವಾಯುಸೇನೆ ಬಾಂಬ್‌ ದಾಳಿ ನಡೆಸಿದೆ.

ದಾಳಿ ಆಗುತ್ತಿದ್ದಂತೆ ಬೆದರಿದ ನಿರೂಪಕಿ ಓಡಿ ಹೋಗಿದ್ದಾರೆ. ಗೋಡೆಗಳು ಉದುರುತ್ತಿರುವ ದೃಶ್ಯ ಸ್ಟುಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಕಳೆದ  4 ದಿನಗಳಿಂದ ನಡೆಯುತ್ತಿರುವ ಇರಾನ್—ಇಸ್ರೇಲ್ ಯುದ್ಧದಲ್ಲಿ ಎರಡೂ ಕಡೆ ಈವರೆಗೆ 224 ಮಂದಿ ಸಾವನ್ನಪ್ಪಿದ್ದರೆ, 1,300ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ.

ಇಸ್ರೇಲ್‌ ನ ಹೈಫಾ, ಟೆಲ್‌ ಅವಿವ್ ಮೇಲೆ ಇರಾನ್ ಕ್ಷಿಪಣಿ ದಾಳಿ ಮಾಡಿದೆ. ಹೈಫಾದ 2 ಪವರ್ ಪ್ಲಾಂಟ್‌ ಗಳನ್ನು ಧ್ವಂಸಗೊಳಿಸಿದೆ. ಟೆಲ್‌ ಅವಿವ್‌ ನ ಪ್ರಧಾನಿ ನೆತನ್ಯಾಹು ಮನೆ ಮೇಲೆ ಮಿಸೈಲ್ ದಾಳಿ ಮಾಡಿದೆ. ನೆತನ್ಯಾಹು ಪಾರಾಗಿದ್ದಾರೆ. ಬೆನ್ನಲ್ಲೇ ಇಸ್ರೇಲ್ ಆಕ್ರಮಣವನ್ನು ಮತ್ತಷ್ಟು ತೀವ್ರಗೊಳಿಸಿದೆ. ಇರಾನ್‌ನ ತೈಲ-ಅನಿಲ ಘಟಕ, ಮಿಲಿಟರಿ ಸೆಂಟರ್‌ಗಳ ಮೇಲೆ ಇಸ್ರೇಲ್ ಬಾಂಬ್ ಮಳೆ ಸುರಿಸಿದೆ. ಇರಾನ್‌ ನ ನಾಲ್ವರು ಗುಪ್ತಚರ ಅಧಿಕಾರಿಗಳು ಬಲಿಯಾಗಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ