ಜೂನ್ 26ರವರೆಗೆ ಭಾರೀ ಮಳೆಯಾಗಲಿದೆ: ಯಾವೆಲ್ಲ ಜಿಲ್ಲೆಗಳಲ್ಲಿ ಮಳೆಯಾಗಲಿದೆ? - Mahanayaka
11:13 PM Thursday 13 - August 2026

ಜೂನ್ 26ರವರೆಗೆ ಭಾರೀ ಮಳೆಯಾಗಲಿದೆ: ಯಾವೆಲ್ಲ ಜಿಲ್ಲೆಗಳಲ್ಲಿ ಮಳೆಯಾಗಲಿದೆ?

rain
20/06/2025

ಬೆಂಗಳೂರು: ಕರಾವಳಿ ಹೊರತುಪಡಿಸಿ ಉಳಿದೆಲ್ಲಾ ಕಡೆ ಒಣಹವೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದ್ದು, ಜೂನ್ 26ರವರೆಗೂ ಮಳೆಯಾಗಲಿದೆ.ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಕಲಬುರಗಿ, ರಾಯಚೂರು, ವಿಜಯಪುರ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ.

ವಿಜಯನಗರ, ತುಮಕೂರು, ರಾಮನಗರ, ಮಂಡ್ಯ, ಕೋಲಾರ, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಬಳ್ಳಾರಿಯಲ್ಲಿ ಒಣಹವೆ ಇರಲಿದೆ. ಉಪ್ಪಿನಂಗಡಿ, ಗೇರುಸೊಪ್ಪ, ಮಂಕಿ, ಯಲ್ಲಾಪುರ, ಆಗುಂಬೆ, ಕೊಟ್ಟಿಗೆಹಾರ, ಕಮ್ಮರಡಿ, ಭಾಗಮಂಡಲ, ಹುಂಚದಕಟ್ಟೆ, ಶಿರಾಲಿ, ಕದ್ರಾ, ಸುಳ್ಯ, ಕುಮಟಾ, ಧರ್ಮಸ್ಥಳ, ಬನವಾಸಿ, ಜೋಯ್ಡಾ, ಬೆಳ್ತಂಗಡಿ, ಹೊನ್ನಾವರ, ತ್ಯಾಗರ್ತಿ, ಖಾನಾಪುರ್, ಗುತ್ತಲ್, ಆನವಟ್ಟಿ, ಕಳಸ, ವಿರಾಜಪೇಟೆ, ಹೊಸಕೋಟೆ, ಅಂಕೋಲಾ, ಪುತ್ತೂರು, ಮೂಡುಬಿದಿರೆ, ಬಂಟವಾಳ, ಸಿದ್ದಾಪುರ, ಮಾಣಿ, ಕಾರವಾರ, ಮುಂಡಗೋಡಿನಲ್ಲಿ ಮಳೆಯಾಗಿದೆ.

ಕರ್ನಾಟಕದಾದ್ಯಂತ ಜೂನ್ 26ರವರೆಗೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.  ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದ್ದು, ಜೂನ್ 26ರವರೆಗೂ ಮಳೆಯಾಗಲಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ