ವಾಟ್ಸಾಪ್ ಬಳಸುತ್ತಿದ್ದೀರಾ? ತಪ್ಪಿಯೂ ಈ ತಪ್ಪನ್ನು ಮಾಡಬೇಡಿ!

ವಾಟ್ಸಾಪ್(Whatsapp) ಬಳಕೆದಾರರು ತಪ್ಪದೇ ಈ ವಿಚಾರವನ್ನು ತಿಳಿದುಕೊಳ್ಳಬೇಕಿದೆ. ಸದ್ಯ ಸೈಬರ್ ವಂಚಕರ (Cyber Crime)ಜಾಲವು ವ್ಯಾಪಕವಾಗಿ ಹರಡಿದೆ. ವಾಟ್ಸಾಪ್ ಗ್ರೂಪ್ ಗಳಲ್ಲಿ ಬರುವ ನಾನಾ ರೀತಿಯ ಮೆಸೇಜ್ ಗಳನ್ನು ನಂಬುವ ಮುನ್ನ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕಿದೆ.
ವಾಟ್ಸಾಪ್ ಗಳಲ್ಲಿ ಬರುವ APK ಫೈಲ್ ಗಳನ್ನು ಯಾವುದೇ ಕಾರಣಕ್ಕೂ ಕ್ಲಿಕ್ ಮಾಡಬೇಡಿ. ಯಾಕೆಂದರೆ, ಈ APK ಫೈಲ್ ಬಳಸಿ ನಿಮ್ಮ ಬ್ಯಾಂಕ್ ಖಾತೆಗಳಲ್ಲಿರುವ ಹಣವನ್ನು ಸೈಬರ್ ವಂಚಕರು ಕದಿಯಬಹುದು.
ಸೈಬರ್ ವಂಚಕರು ಅಪರಿಚಿತ ಸಂಖ್ಯೆಗಳ ಮೂಲಕ ನಿಮಗೆ APK ಫೈಲ್(APK File) ಗಳನ್ನು ಕಳುಹಿಸಬಹುದು. ಅವರು ಕಳುಹಿಸಿದ ನಂಬರ್ ಯಾವುದೋ ಬ್ಯಾಂಕ್ ನ ನಂಬರ್ ನಂತೆ ನಿಮಗೆ ಕಾಣಿಸುವಂತೆಯೂ ಮಾಡಿರಬಹುದು. ಜನರನ್ನು ನಂಬಿಸಲು ಸೈಬರ್ ವಂಚಕರು ನಾನಾ ವೇಷ ಧರಿಸುತ್ತಾರೆ. ಹಾಗಾಗಿ ಹಣ ಕಳೆದುಕೊಳ್ಳುವ ಮುನ್ನ ನೀವು ಎಚ್ಚೆತ್ತುಕೊಳ್ಳಬೇಕಿದೆ.
ವಾಟ್ಸಾಪ್ ನಲ್ಲಿ APK ಫೈಲ್ ಗಳನ್ನು ಡೌನ್ ಲೋಡ್(Download )ಮಾಡಲು ಹೋಗಲೇ ಬೇಡಿ, ಇದರಿಂದ ನಿಮ್ಮ ವಾಟ್ಸಾಪ್ ಖಾತೆಯನ್ನು ಕೂಡ ಸೈಬರ್ ವಂಚಕರು ದುರ್ಬಳಕೆ ಮಾಡಿಕೊಳ್ಳಬಹುದು. ನಿಮ್ಮ ವಾಟ್ಸಾಪ್ ಖಾತೆಯಿಂದಲೇ ಫ್ರಾಡ್ ಮೆಸೇಜ್ ಗಳನ್ನು ಸೈಬರ್ ವಂಚಕರು ಕಳುಹಿಸಬಹುದು.
ತಂತ್ರಜ್ಞಾನಗಳು ಬೆಳೆಯುತ್ತಿದ್ದಂತೆಯೇ ಅದನ್ನು ಮೀರಿಸಿದ ವಂಚಕರು ಹುಟ್ಟಿಕೊಳ್ಳುತ್ತಾರೆ. ಸೈಬರ್ ವಂಚನೆಯ ಪ್ರಕರಣಗಳನ್ನು ಸಮರ್ಥವಾಗಿ ಎದುರಿಸಲು ಸಾರ್ವಜನಿಕರು ಎಚ್ಚರಿಕೆ ವಹಿಸಬೇಕಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: