ಹಿಂದೂ ಜಾಗರಣ ವೇದಿಕೆ ಮುಖಂಡನ ಮೊಬೈಲ್ ನಲ್ಲಿ 50ರಷ್ಟು ಅಶ್ಲೀಲ ವಿಡಿಯೋಗಳು ಪತ್ತೆ: ಪ್ರಕರಣ ದಾಖಲು - Mahanayaka

ಹಿಂದೂ ಜಾಗರಣ ವೇದಿಕೆ ಮುಖಂಡನ ಮೊಬೈಲ್ ನಲ್ಲಿ 50ರಷ್ಟು ಅಶ್ಲೀಲ ವಿಡಿಯೋಗಳು ಪತ್ತೆ: ಪ್ರಕರಣ ದಾಖಲು

mobile
05/07/2025

ಮೂಡುಬಿದಿರೆ: ಹಿಂದೂ ಜಾಗರಣ ವೇದಿಕೆಯ ಮುಖಂಡರೊಬ್ಬರ ಮೊಬೈಲ್ ಫೋನ್ ನಲ್ಲಿ ಸುಮಾರು  50ರಷ್ಟು ಅಶ್ಲೀಲ ವಿಡಿಯೋಗಳು ಪತ್ತೆಯಾಗಿರುವ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಹಿಂದೂ ಜಾಗರಣ ವೇದಿಕೆಯ ಮುಖಂಡ, ಮುಲ್ಕಿ—ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಅವರ ಆಪ್ತ ಎಂದು ಹೇಳಲಾಗಿರುವ ಸಮಿತ್ ರಾಜ್ ಧರೆಗುಡ್ಡೆ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.

ಏನಿದು ಘಟನೆ?

2024ರಲ್ಲಿ ಮೂಡುಬಿದಿರೆ ತಾಲೂಕಿನ ಮಿಜಾರು ಬಳಿ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಖಾಸಗಿ ಬಸ್ ಮತ್ತು ದ್ವಿಚಕ್ರ ವಾಹನ ಅಪಘಾತ ಸಂಭವಿಸಿತ್ತು. ಈ ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆ ಹಾಗೂ ಅವರ ಪುತ್ರಿಗೆ, ಬಸ್ ಮಾಲಕನಿಗೆ ಒತ್ತಡ ಹಾಕಿ ಸಮಿತ್ ರಾಜ್ 5 ಲಕ್ಷ ರೂ. ಪರಿಹಾರ ತೆಗೆಸಿಕೊಟ್ಟಿದ್ದ ಎನ್ನಲಾಗಿದೆ.  ಈ ವಿಚಾರಕ್ಕೆ ಸಂಬಂಧಿಸಿದಂತೆ ಖಾಸಗಿ ಬಸ್ ಮಾಲಕ, ಸಮಿತ್ ರಾಜ್ ವಿರುದ್ಧ ಬೆದರಿಕೆ ಮತ್ತು ಅಕ್ರಮ ಹಣ ವಸೂಲಿ ಆರೋಪಿಸಿ  2024ರಲ್ಲಿ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಈ ಪ್ರಕರಣದ ವಿಚಾರಣೆ ನಡೆಸುವಂತೆ ಇತ್ತೀಚೆಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಪೊಲೀಸರಿಗೆ ಸೂಚನೆ ನೀಡಿದ್ದರು. ಹೀಗಾಗಿ ಸಮಿತ್ ರಾಜ್ ನನ್ನು ಬಂಧಿಸಿದ ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ ಪಿ.ಜಿ. ಜೂ.26ರಂದು ಪೊಲೀಸ್ ಠಾಣೆಗೆ ಕರೆತಂದಿದ್ದರು. ಬಳಿಕ ಸಮಿತ್ ಸಮಿತ್ ರಾಜ್ ನ ಫೋನ್ ನ್ನು ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ಸೆನ್ ಲ್ಯಾಬ್ ಗೆ ಕಳುಹಿಸಲಾಗಿತ್ತು. ಈ ವೇಳೆ ಮೊಬೈಲ್ ನ ದತ್ತಾಂಶಗಳನ್ನು ರಿಟ್ರೈವ್ ಮಾಡಿದ ವೇಳೆ ಮಹಿಳೆಯರೊಂದಿಗಿನ ಅಶ್ಲೀಲ ವಿಡಿಯೋಗಳು ಮತ್ತು ವೆಬ್ ಸೈಟ್ ಗಳಿಂದ ಡೌನ್ ಲೋಡ್ ಮಾಡಲಾಗಿದ್ದ ಸುಮಾರು 40ರಿಂದ 50 ವಿಡಿಯೋಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.

ಈ ಸಂಬಂಧ ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ. ನೀಡಿರುವ ದೂರಿನಂತೆ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ