Breaking News.. ಧರ್ಮಸ್ಥಳದ ದಟ್ಟ ಕಾಡಿನಲ್ಲಿ ಸ್ಥಳ ಮಹಜರು: ಮಣ್ಣಲ್ಲಿ ಮಣ್ಣದ ಸತ್ಯ ಹೊರ ಬರುತ್ತಾ?

ಧರ್ಮಸ್ಥಳ: ನೂರಾರು ಶವಗಳನ್ನು ಹೂತುಹಾಕಿರುವ ಪ್ರಕರಣ ಸಂಬಂಧ ಎಸ್ ಐಟಿ ತನಿಖೆ ಆರಂಭಗೊಂಡಿದ್ದು, ಇಂದು ಧರ್ಮಸ್ಥಳಕ್ಕೆ ಅನಾಮಿಕ ವ್ಯಕ್ತಿಯನ್ನು ಕರೆತಂದ ಎಸ್ ಐಟಿ ಅಧಿಕಾರಿಗಳು ಸ್ಥಳ ಮಹಜರು ನಡೆಸುತ್ತಿದ್ದಾರೆ.
ಧರ್ಮಸ್ಥಳದ ದಟ್ಟಕಾಡಿನಲ್ಲಿ ತಾನು ಶವಗಳನ್ನು ಹೂತು ಹಾಕಿರುವ ಸ್ಥಳಗಳನ್ನು ಅನಾಮಿಕ ವ್ಯಕ್ತಿ ತೋರಿಸುತ್ತಿದ್ದಾನೆ. ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಬಿಗಿ ಭದ್ರತೆಯ ನಡುವೆ ಶವ ಹೂತು ಹಾಕಿರುವ ಸ್ಥಳದ ಮಹಜರು ನಡೆಯುತ್ತಿದೆ. ಧರ್ಮಸ್ಥಳದಲ್ಲಿ ಹೂತುಹಾಕಲಾಗಿರುವ ಶವಗಳ ಸಾವಿನ ರಹಸ್ಯ ಹೊರ ಬೀಳಲು ಇದು ಮಹತ್ವದ ಹಂತವಾಗಿದೆ.
ಮಾಸ್ಕ್ ಧರಿಸಿದ್ದ ವ್ಯಕ್ತಿ ಇಂದು ಬಿಗಿ ಭದ್ರತೆಯ ನಡುವೆ ಧರ್ಮಸ್ಥಳಕ್ಕೆ ಆಗಮಿಸಿದ್ದು, ತನಿಖಾ ತಂಡ ಧರ್ಮಸ್ಥಳದ ದಟ್ಟ ಕಾಡಿನಲ್ಲಿ ಶವಗಳ ಅವಶೇಷಗಳಿಗಾಗಿ ಶೋಧ ನಡೆಸುತ್ತಿದೆ. ಪೊಲೀಸ್ ಅಧಿಕಾರಿಗಳು ಸೇರಿದಂತೆ ವಿವಿಧ ವಿಧ ವಿಜ್ಞಾನ ತಜ್ಞರು ಕೂಡ ಮಹಜರಿನಲ್ಲಿ ಭಾಗಿಯಾಗಿದ್ದಾರೆ. ಹೆಚ್ಚಿನ ವಿವರ ಇನ್ನಷ್ಟೇ ತಿಳಿದು ಬರಬೇಕಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD