ಆಗಸ್ಟ್ 2: ಪರಿವರ್ತನಾ ಕೋ—ಆಪರೇಟಿವ್ ಸೊಸೈಟಿ ಇ–ಸ್ಟ್ಯಾಂಪ್ ಉದ್ಘಾಟನೆ

ಮಂಗಳೂರು: ಪರಿವರ್ತನಾ ಕೋ—ಆಪರೇಟಿವ್ ಸೊಸೈಟಿ(ರಿ)-(Parivartana Co-operative Society) ಬಜಪೆ ಇದರ ಮಂಗಳೂರು ಶಾಖೆಯ ಇ—ಸ್ಟ್ಯಾಂಪ್(E-Stamp) ಸೌಲಭ್ಯದ ಉದ್ಘಾಟನೆ ಕಾರ್ಯಕ್ರಮವು ಆಗಸ್ಟ್ 2ರಂದು ಶನಿವಾರ ಬೆಳಿಗ್ಗೆ 10:30ಕ್ಕೆ ಮಂಗಳೂರು ನಗರದ ಸ್ಟೇಟ್ ಬ್ಯಾಂಕ್ ನಲ್ಲಿರುವ ಪಯೋನಿಯರ್ ಕಾಂಪ್ಲೆಕ್ಸ್ ನಲ್ಲಿರುವ ಕಚೇರಿಯಲ್ಲಿ ನಡೆಯಲಿದೆ.
ಪರಿವರ್ತನಾ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಕೃಷ್ಣಾನಂದ ಡಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ನೋಟರಿ ವಕೀಲರಾದ ಇಸ್ಮಾಯಿಲ್, ಕ.ದ.ಸಂ.ಸ. ಜಿಲ್ಲಾ ಸಂಚಾಲಕರಾದ ಸದಾಶಿವ ಪಡುಬಿದ್ರಿ, ಪರಿವರ್ತನಾ ಕೋ–ಆಪರೇಟಿವ್ ಸೊಸೈಟಿಯ ಮಾಜಿ ಅಧ್ಯಕ್ಷರಾದ ವಿಲಿಯಂ ಇ ಲೋಬೊ, ಸಾಮಾಜಿಕ ಕಾರ್ಯಕರ್ತರಾದ ಮುನೀರ್ ಕಾಟಿಪಳ್ಳ, ಸಾಮರಸ್ಯ ಮಂಗಳೂರು ಅಧ್ಯಕ್ಷರಾದ ಮಂಜುಳಾ ನಾಯಕ್ , ಪರಿವರ್ತನಾ ಕೋ-ಆಪರೇಟಿವ್ ಸೊಸೈಟಿಯ ಕಾನೂನು ಸಲಹೆಗಾರರಾದ ಸುಕೇಶ್ ಕುಮಾರ್, ಭುವಿ”, ಭೂ ಮಾಪನ ಭೂ ದಾಖಲೆಗಳ ಸೇವಾ ಕೇಂದ್ರದ ಜಯಕುಮಾರ್, ವಕೀಲರಾದ ಸರ್ಫ್‌ರಾಜ್, ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ ಅಧ್ಯಕ್ಷರಾದ ಮುಜಾಫರ್ ಅಹಮ್ಮದ್, ದ.ಕ.ಬೀದಿ ಬದಿ ವ್ಯಾಪಾರಸ್ಥರ ಸಹಕಾರ ಸಂಘದ ಉಪಾಧ್ಯಕ್ಷರಾದ ಹರೀಶ್ ಪೂಜಾರಿ, ನಂದಿನಿ ಪತ್ತಿನ ಸಹಕಾರ ಸಂಘದ ಶಶಿಧರ್ ಶೆಟ್ಟಿ, ಕಟೀಲು ವಿವಿದ್ದೋದೇಶ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಷಾ, ವಕೀಲರಾದ ಶಕೀಲುರ್ರಹ್ಮಾನ್ ಭಾಗವಹಿಸಲಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD