ಮಳೆಗೆ ಮೈಮೇಲೆ ಮುರಿದು ಬಿದ್ದ ಮರದ ಕೊಂಬೆ: ಗಂಭೀರವಾಗಿ ಗಾಯಗೊಂಡ ಟೆಕ್ಕಿ! - Mahanayaka
9:07 AM Thursday 29 - January 2026

ಮಳೆಗೆ ಮೈಮೇಲೆ ಮುರಿದು ಬಿದ್ದ ಮರದ ಕೊಂಬೆ: ಗಂಭೀರವಾಗಿ ಗಾಯಗೊಂಡ ಟೆಕ್ಕಿ!

rain
08/05/2024

ಬೆಂಗಳೂರು: ಮಳೆ ಸುರಿಯುತ್ತಿದ್ದ ವೇಳೆ ಮರದ ಕೊಂಬೆ ಮುರಿದು ಬಿದ್ದು ರಸ್ತೆಯಲ್ಲಿ ಹೋಗುತ್ತಿದ್ದ ಟೆಕ್ಕಿಯೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಿ.ವಿ.ರಾಮನ್ ನಗರದ ನಾಗವಾರಪಾಳ್ಯದ 2ನೇ ಕ್ರಾಸ್ ನಲ್ಲಿ ನಡೆದಿದೆ.

ಐಟಿ ಕಂಪೆನಿಯ ಉದ್ಯೋಗಿ ರವಿ ಕುಮಾರ್(26) ಗಂಭೀರವಾಗಿ ಗಾಯಗೊಂಡವರಾಗಿದ್ದು, ಮರದ ಕೊಂಬೆ ಬಿದ್ದ ಪರಿಣಾಮ ಅವರ ಬೆನ್ನು ಮೂಳೆ ಮುರಿತಕ್ಕೊಳಗಾಗಿದ್ದು, ಸದ್ಯ ಹೆಚ್ ಎಎಲ್ ನ ಮಣಿಪಾಲ್ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಮರ ರಭಸವಾಗಿ ಕೆಳಗೆ ಬಿದ್ದಿದ್ದು, ಪರಿಣಾಮವಾಗಿ ಟೆಕ್ಕಿಯ ಸ್ಪೈನ್ ಕಾರ್ಡ್ ಮುರಿದು ಹೋಗಿದೆ. ಬಿಬಿಎಂಪಿ ಉಸ್ತುವಾರಿಯಲ್ಲಿ ಗಾಯಾಳುಗೆ ಚಿಕಿತ್ಸೆ ನೀಡಲಾಗುತ್ತಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ