ಪ್ರಿಯತಮೆ ಜೊತೆ ಸೇರಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಬರ್ಬರ ಹತ್ಯೆ! - Mahanayaka

ಪ್ರಿಯತಮೆ ಜೊತೆ ಸೇರಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಬರ್ಬರ ಹತ್ಯೆ!

chikkaballapura
08/05/2024

ಚಿಕ್ಕಬಳ್ಳಾಪುರ: ವ್ಯಕ್ತಿಯೋರ್ವ ತನ್ನ ಪ್ರಿಯತಮೆಯ ಎದುರೇ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆಸಿ ಬರ್ಬರವಾಗಿ ಹತ್ಯೆ ನಡೆಸಿರುವ ವಿಲಕ್ಷಣ ಘಟನೆ  ಗೌರಿಬಿದನೂರು ತಾಲೂಕಿನ ಕೊನಗಾನಹಳ್ಳಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.

ಅಲುಮೇಲಮ್ಮ(40) ಅತ್ಯಾಚಾರಕ್ಕೀಡಾಗಿ ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದ್ದು, ಸಂಜೀವಪ್ಪ ಎಂಬಾತ ಕೃತ್ಯ  ನಡೆಸಿದ್ದಾನೆ. ಈತನ ಪ್ರಿಯತಮೆ ರಾಮಾಂಜಿನಮ್ಮ  ಕೂಡ ಕೃತ್ಯಕ್ಕೆ ಸಾಥ್ ನೀಡಿದ್ದಾಳೆ ಎನ್ನಲಾಗಿದೆ.

ಸಂಜೀವಪ್ಪ ಹಾಗೂ ರಾಮಾಂಜಿನಮ್ಮ ನಡುವೆ ಅನೈತಿಕ ಸಂಬಂಧವಿದ್ದು, ಅಲುಮೇಲಮ್ಮ ಈ ಸಂಬಂಧಕ್ಕೆ ಅಡ್ಡಿಯಾಗಿದ್ದಳು ಎನ್ನಲಾಗಿದೆ.   ನಾಲ್ಕು ದಿನಗಳ ಹಿಂದೆ ಗ್ರಾಮದಿಂದ ಅಲುಮೇಲಮ್ಮ ನಾಲ್ಕು ದಿನಗಳ ಹಿಂದೆ ಗ್ರಾಮದಿಂದ ನಾಪತ್ತೆಯಾಗಿದ್ದಳು. ಈ ನಡುವೆ ರಾಮಾಂಜಿನಮ್ಮ ವರ್ತನೆಯಿಂದ ಗ್ರಾಮಸ್ಥರು ಅನುಮಾನಗೊಂಡಿದ್ದರು.

ಗ್ರಾಮಸ್ಥರು ರಾಮಾಂಜಿನಮ್ಮನನ್ನು ವಿಚಾರಿಸಿದಾಗ ಸತ್ಯ ಬಾಯ್ಬಿಟ್ಟಿದ್ದಾಳೆ.  ಘಟನಾ ಸ್ಥಳಕ್ಕೆ ಗೌರಿ ಬಿದನೂರು ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ