ಹೊಟೇಲ್ ನಲ್ಲಿ ನುಂಗಿದ್ದ 10 ಮೊಟ್ಟೆಗಳನ್ನ ಕಕ್ಕಿದ ನಾಗರಹಾವು!

ಚಿಕ್ಕಮಗಳೂರು: ಕೊಟ್ಟಿಗೆಗಾರದ ಉಡುಪಿ ವೈಭವ್ ಹೊಟೇಲ್ ಗೆ ನುಗ್ಗಿದ್ದ ನಾಗರಹಾವು ಹೊಟೇಲ್ ನಲ್ಲಿದ್ದ 10 ಮೊಟ್ಟೆಗಳನ್ನು ನುಂಗಿ ಹಾಕಿತ್ತು.
ಸದ್ಯ ನಾಗರಹಾವು ನುಂಗಿದ್ದ 10 ಮೊಟ್ಟೆಗಳನ್ನೂ ಸ್ನೇಕ್ ಆರೀಫ್ ಅವರು ಕಕ್ಕಿಸಿದ್ದು, ಬಳಿಕ ಅರಣ್ಯಕ್ಕೆ ಬಿಟ್ಟಿದ್ದಾರೆ.
ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕೊಟ್ಟಿಗೆಗಾರದ ಉಡುಪಿ ವೈಭವ್ ಹೊಟೇಲ್ ಗೆ ನುಗ್ಗಿದ್ದ ನಾಗರಹಾವು, ಹೊಟೇಲ್ ನಲ್ಲಿದ್ದ 10 ಮೊಟ್ಟೆಯನ್ನ ನುಂಗಿತ್ತು. ವೇಳೆ ಸ್ನೇಕ್ ಆರೀಫ್ ಅವರು ಸ್ಥಳಕ್ಕೆ ಆಗಮಿಸಿ, ಹಾವಿನ ಬಾಲವನ್ನು ಎತ್ತುತ್ತಿದ್ದಂತೆಯೇ ನುಂಗಿದ್ದ ಮೊಟ್ಟೆಗಳನ್ನು ಹಾವು ಕಕ್ಕಿದೆ.
ಇದೇ ವೇಳೆ ಹೊಟೇಲ್ ನ ಮಾಲಿಕ ನಾಗರ ಹಾವಿಗೆ ಭಯಭಕ್ತಿಯಿಂದ ಪೂಜೆ ಮಾಡಿ ಕೈಮುಗಿದರು. ಸ್ನೇಕ್ ಆರೀಫ್ ನಾಗರ ಹಾವನ್ನು ಸೆರೆ ಹಿಡಿದು ಚಾರ್ಮಾಡಿ ಅರಣ್ಯಕ್ಕೆ ಬಿಟ್ಟಿದ್ದು, ನಾಗರ ಹಾವನ್ನು ರಕ್ಷಣೆ ಮಾಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/HEkqDgrW2BlJLad5kZ1DX7