ವಂದೇ ಭಾರತ್ ರೈಲಿನಲ್ಲಿ ಪೂರೈಸಿದ ಊಟದಲ್ಲಿ ಸತ್ತ ಜಿರಳೆ ಪತ್ತೆ!
ಭೋಪಾಲ್: ಐಶಾರಾಮಿ ವಂದೇ ಭಾರತ್ ರೈಲಿನಲ್ಲಿ ಒದಗಿಸಲಾದ ಊಟದಲ್ಲಿ ಜಿರಳೆ ಪತ್ತೆಯಾಗಿರುವ ಬಗ್ಗೆ ಪ್ರಯಾಣಿಕರೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಾ.ಸುಭೇಂದು ಕೆಶಾರಿ ಅವರು ಭೋಪಾಲ್ ನ ರಾಣಿ ಕಮ್ಲಾಪತಿ ರೈಲು ನಿಲ್ದಾಣದಿಂದ ಜಬಲ್ಪುರ ಜಂಕ್ಷನ್ ಗೆ ರೇವಾ ವಂದೇ ಭಾರತ್ ರೈಲಿನಲ್ಲಿ ತೆರಳುತ್ತಿದ್ದರು. ಈ ವೇಳೆ ಅವರು ಆರ್ಡರ್ ಮಾಡಿದ್ದ ಊಟದಲ್ಲಿ ಸತ್ತ ಜಿರಳೆಯೊಂದು ಪತ್ತೆಯಾಗಿದೆ. ಈ ಬಗ್ಗೆ ಅವರು ಜಬಲ್ಪುರ ರೈಲು ನಿಲ್ದಾಣದಲ್ಲಿ ದೂರು ನೀಡಿದ್ದಾರೆ. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, “ನಾನು ಆರ್ಡರ್ ಮಾಡಿದ ಊಟದಲ್ಲಿ ಸತ್ತ ಜಿರಳೆಯನ್ನು ನೋಡಿ ಆಘಾತವಾಯಿತು” ಎಂದು ಬರೆದುಕೊಂಡಿದ್ದಾರೆ
ಇನ್ನೂ ಡಾ.ಸುಭೇಂದು ಕೆಶಾರಿ ಅವರ ಇವರ ಪೋಸ್ಟ್‌ಗೆ ಐಆರ್ ಸಿಟಿಸಿ ಪ್ರತಿಕ್ರಿಯೆ ನೀಡಿದ್ದು, ನೀವು ಅನುಭವಿಸಿದ ತೊಂದರೆಗೆ ಕ್ಷಮೆಯಾಚಿಸುತ್ತೇವೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಸರ್ವಿಸ್ ಪ್ರೊವೈಡರ್ ಗೆ ಭಾರಿ ದಂಡ ವಿಧಿಸಿದ್ದೇವೆ. ಹಾಗೆಯೇ, ಹೆಚ್ಚಿನ ನಿಗಾ ಇರಿಸಲು ಕೂಡ ಕ್ರಮ ತೆಗೆದುಕೊಳ್ಳುತ್ತೇವೆ” ಎಂದು ಸ್ಪಷ್ಟಪಡಿಸಿದೆ.




























