ಕುಡಿದು ತೂರಾಡುತ್ತಾ ರಸ್ತೆಯಲ್ಲಿ ಪತ್ತೆಯಾದ ಖ್ಯಾತ ಪತ್ರಕರ್ತ: ಇದು ಕತ್ತೆ ಬಾಲ ಕುದುರೆ ಜುಟ್ಟು ಎಂದ ದರ್ಶನ್ ಫ್ಯಾನ್ಸ್! - Mahanayaka

ಕುಡಿದು ತೂರಾಡುತ್ತಾ ರಸ್ತೆಯಲ್ಲಿ ಪತ್ತೆಯಾದ ಖ್ಯಾತ ಪತ್ರಕರ್ತ: ಇದು ಕತ್ತೆ ಬಾಲ ಕುದುರೆ ಜುಟ್ಟು ಎಂದ ದರ್ಶನ್ ಫ್ಯಾನ್ಸ್!

ajith hanumakkanavar
17/09/2024

ಖ್ಯಾತ ಪತ್ರಕರ್ತರು ಎನ್ನಲಾದ ವ್ಯಕ್ತಿಯೊಬ್ಬರು ಕುಡಿದು ತೂರಾಡುತ್ತಾ, ರಸ್ತೆಯಲ್ಲಿ ತೆರಳುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದು ಕತ್ತೆ ಬಾಲ ಕುದುರೆ ಜುಟ್ಟು ಖ್ಯಾತಿಯ ಪತ್ರಕರ್ತರದ್ದು ಅಂತ ದರ್ಶನ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.

ಕಾರೊಂದರ ಬಳಿ ವ್ಯಕ್ತಿಯೊಬ್ಬರು ವಾಲುತ್ತಾ ಓಡಾಡುತ್ತಿರುವುದು ಸುಸ್ತಾಗಿ ಕುಳಿತಿರುವುದು ವಿಡಿಯೋದಲ್ಲಿ ಕಾಣಿಸಿಕೊಂಡಿದೆ. ಮಹಿಳೆಯೊಬ್ಬರು ಕೂಡ ಈ ಕಾರಿನ ಸಮೀಪ ಕಾಣಿಸಿಕೊಂಡಿದ್ದಾರೆ.

ಈ ವಿಡಿಯೋ ಇದೀಗ ಟ್ರೋಲ್ ಪೇಜ್ ಗಳಿಗೆ ಆಹಾರವಾಗಿದೆ. ದರ್ಶನ್ ಗೆ ಅಂದು ಹಾಗೆ ಹೇಳಿದ್ರಿ, ಇಂದು ನಿಮಗೆ ಕರ್ಮ ರಿಟರ್ನ್ಸ್ ಆಗಿದೆ ಅಂತ ದರ್ಶನ್ ಅಭಿಮಾನಿಗಳು ಸಂಭ್ರಮಿಸಿದ್ದಾರೆ.

ಯಾರಿವನು ಎಣ್ಣೆ ಗಾಡಿ ಅಂದುಕೊಂಡ್ರಾ, ಇದು ದಿ ಫೇಮಸ್ ಕತ್ತೆ ಬಾಲ ಕುದುರೆ ಜುಟ್ಟು ಅಂತ ದರ್ಶನ್ ಫ್ಯಾನ್ಸ್ TV 14 ಎಂಬ ಚಾನೆಲ್ ಪ್ರಸಾರ ಮಾಡಿರುವ ವಿಡಿಯೋವನ್ನ ಶೇರ್ ಮಾಡಿಕೊಂಡು ಬರೆದುಕೊಂಡಿದ್ದಾರೆ.

ರಸ್ತೆಯಲ್ಲಿ ಕಾರೊಂದರ ಬಳಿ ನಡೆದುಕೊಂಡು ಹೋಗುತ್ತಿರುವ ವ್ಯಕ್ತಿ, ಖ್ಯಾತ ಪತ್ರಕರ್ತ ಎನ್ನಲಾಗಿದೆ. ಅವರು ಕುಡಿತದ ಮತ್ತಿನಲ್ಲಿ ತೇಲಾಡುತ್ತಾ ಕಾರಿನ ಬಳಿ ತೆರಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ