ಹುಲಿ ಚರ್ಮ ಕಂಟಕ: ಶಾಖಾದ್ರಿ ನಿವಾಸದ ಮುಂದೆ ಕಾದು ಕುಳಿತ ಅರಣ್ಯ ಸಿಬ್ಬಂದಿ - Mahanayaka
12:57 AM Saturday 13 - December 2025

ಹುಲಿ ಚರ್ಮ ಕಂಟಕ: ಶಾಖಾದ್ರಿ ನಿವಾಸದ ಮುಂದೆ ಕಾದು ಕುಳಿತ ಅರಣ್ಯ ಸಿಬ್ಬಂದಿ

chikkamagaluru
27/10/2023

ಚಿಕ್ಕಮಗಳೂರು: ಶಾಖಾದ್ರಿ ಹುಲಿ ಚರ್ಮದ ಮೇಲೆ ಕುಳಿತಿರುವ ಪೋಟೋ ವೈರಲ್ ಹಿನ್ನೆಲೆ ಶಾಖಾದ್ರಿ ಮನೆಗೆ ಅರಣ್ಯಾಧಿಕಾರಿಗಳ ತಂಡ ಭೇಟಿ ನೀಡಿದೆ.

ಮನೆಗೆ ಬೀಗ ಹಾಕಿದ್ದ ಹಿನ್ನೆಲೆ ಹೊರ ಭಾಗದಲ್ಲಿ ಅರಣ್ಯ ಸಿಬ್ಬಂದಿ ಕಾದು ಕುಳಿತಿದ್ದಾರೆ. ಹುಲಿ ಚರ್ಮದ ಬಗ್ಗೆ ಮಾಹಿತಿಗಾಗಿ ಅರಣ್ಯ ಸಿಬ್ಬಂದಿಗಳು ಆಗಮಿಸಿದ್ದಾರೆ.

ನಗರದ ಮಾರ್ಕೆಟ್ ರಸ್ತೆಯಲ್ಲಿ ಇರುವ ಇನಾಂ ದತ್ತಾತ್ರೇಯ ಬಾಬಾಬುಡನ್ ಗಿರಿ ಸ್ವಾಮಿ ದರ್ಗಾ ದೇವಸ್ಥಾನದ ಅರ್ಚಕರ ಶಾಖಾದ್ರಿ ನಿವಾಸ ಮಾರ್ಕೆಟ್ ರಸ್ತೆಯಲ್ಲಿರುವ ಶಾಖಾದ್ರಿ ಸೈಯದ್ ಗೌಸ್ ಮೋಯಿದ್ದೀನ್ ನಿವಾಸದ ಎದುರು  ಅರಣ್ಯ ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದೆ. ಆರ್.ಎಫ್. ಓ. ಮೋಹನ್ ನೇತೃತ್ವದಲ್ಲಿ ತಂಡ ಭೇಟಿ ನೀಡಿದೆ.

ಇತ್ತೀಚಿನ ಸುದ್ದಿ