ಅಜ್ಜಿಯ ಬಂಗಾರದ ಮೇಲೆ ಮೊಮ್ಮಗನ ಕಣ್ಣು |  ಸಿನಿಮೀಯ ರೀತಿಯಲ್ಲಿ ಆರೋಪಿಗಳನ್ನು ಬಂಧನ | ಎಸ್ಪಿ ಹನುಮಂತರಾಯ್ ಐಪಿಎಸ್  ಮೆಚ್ಚುಗೆಗಳಿಸಿದ ಪೊಲೀಸರು - Mahanayaka
6:42 PM Wednesday 20 - August 2025

ಅಜ್ಜಿಯ ಬಂಗಾರದ ಮೇಲೆ ಮೊಮ್ಮಗನ ಕಣ್ಣು |  ಸಿನಿಮೀಯ ರೀತಿಯಲ್ಲಿ ಆರೋಪಿಗಳನ್ನು ಬಂಧನ | ಎಸ್ಪಿ ಹನುಮಂತರಾಯ್ ಐಪಿಎಸ್  ಮೆಚ್ಚುಗೆಗಳಿಸಿದ ಪೊಲೀಸರು

27/10/2020


Provided by

ದಾವಣಗೆರೆ: ನ್ಯಾಮತಿ ತಾಲೂಕಿನ ಹೊಸಜೋಗ ಗ್ರಾಮದ ಯೋಶೋಧ ಬಾಯಿ ಇವರು ಮೊಮ್ಮಗಳ ತೊಟ್ಟಿಲು ಕಾರ್ಯಕ್ಕಾಗಿ ಶಿವಮೊಗ್ಗ ತಾಲೂಕಿನ ಕೊನಗವಳ್ಳಿ ಗ್ರಾಮಕ್ಕೆ ಹೋಗಿದ್ದರು . ಯಶೋಧ ಬಾಯಿ ಮೊಮ್ಮಗಳ ತೊಟ್ಟಿಲು ಕಾರ್ಯವನ್ನು ಮುಗಿಸಿಕೊಂಡು ಸಂಬಂಧಿ ಮೊಮ್ಮಗನಾದ ಗುರುರಾಜ ಎಂಬುವವನು ಯಶೋಧ ಬಾಯಿಯನ್ನು ಬೈಕಿನಲ್ಲಿ ಸ್ವಗ್ರಾಮವಾದ (ಸೇವಲಾಲ್ ನಗರ) ಹೊಸಜೋಗಕ್ಕೆ ಕರೆದುಕೊಂಡು ಬರುತ್ತಿದ್ದನು. ಗುರುರಾಜ ತನ್ನ ಸ್ನೇಹಿತರಿಗೆ ನಮ್ಮ ಅಜ್ಜಿಯ ಕೊರಳ ಮಾಂಗಲ್ಯಸರವನ್ನು ಹೇಗಾದರೂ ಮಾಡಿ ಕದಿಯಬೇಕು ಎಂದು ಮುಂಚೇನೆ ತನ್ನ ಸ್ನೇಹಿತರೋಂದಿಗೆ ಸ್ಕೆಚ್ ಹಾಕಿಕೊಂಡಿದ್ದನು .ಸೋಮವಾರದಂದು ಅದರಂತೆ ಆತನ ಎರಡು ಜನ ಸ್ನೇಹಿತರು ಚಿನ್ನಿಕಟ್ಟೆ ಗ್ರಾಮದ ಕೆರೆಯ ಏರಿಯ ಮೇಲೆ ಬರುತ್ತಿರುವಾಗ ಬೈಕನ್ನು ಅಡ್ಡಗಟ್ಟಿ ಸರಗಳ್ಳರ ಹಾಗೆ ಚಾಕುವನ್ನು ಯಶೋಧ ಬಾಯಿಯ ಕೊರಳಿನತ್ತ ಹಿಡಿದು ಮತ್ತೊಬ್ಬ ಯಶೋಧ ಬಾಯಿಯ ಕೊರಳಲ್ಲಿದ್ದ 5 ತೊಲೆ ತೂಕದ ಮಾಂಗಲ್ಯಸರ, 2 ತೊಲೆ ತೂಕದ ಕಿವಿಯ ಬೆಂಡೊಲೆ ಜುಮ್ಕೆ ಓಲೆಗಳು, ಕೆನ್ಯೆಸರ ಹಾಗೂ 1,000 ರೂ. ಬೆಲೆ ಬಾಳುವ ಉಮಾಗೋಲ್ಡ್ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು.


ಈ ಸಂಬಂಧ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಯಶೋಧಬಾಯಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ನ್ಯಾಮತಿ ಪೊಲೀಸರು ಜಿಲ್ಲಾ ರಕ್ಷಣಾಧಿಕಾರಿಗಳಾದ ಹನುಮಂತರಾಯ ಐಪಿಎಸ್, ಹಾಗೂ ಡಿವೈಎಸ್ಪಿ ಪ್ರಶಾಂತ್ ಜಿ ಮುನ್ನೂಳಿ ರವರುಗಳ ಮಾರ್ಗದರ್ಶನದೊಂದಿಗೆ ಪೊಲೀಸ್ ಹೊನ್ನಾಳಿ ವೃತ್ತ ನಿರೀಕ್ಷಕರಾದ ದೇವರಾಜ್ ನೇತೃತ್ವದಲ್ಲಿ ನ್ಯಾಮತಿ ಪಿಎಸ್ ಐ ಹನುಮಂತಪ್ಪ ಶಿರೆಹಳ್ಳಿ ಹಾಗೂ ಸಿಬ್ಬಂದಿಯನ್ನೊಳಗೊಂಡು ಆರೋಪಿಗಳ ಪತ್ತೆಗಾಗಿ ಕಾರ್ಯಚರಣೆ ನಡೆಸುತ್ತಾರೆ . ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.


ವಿಚಾರಣೆಯ ಬಳಿಕ ಸ್ವಂತ ಸಂಬಂಧದಲ್ಲಿ ಪ್ರಮುಖ ಆರೋಪಿ ಮೊಮ್ಮಗನಾಗಬೇಕು ಎಂದು ತಿಳಿದಿದೆ. ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಹಾಗೂ 2 ಲಕ್ಷ 30 ಸಾವಿರ ಮೌಲ್ಯದ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನ್ಯಾಮತಿ ಪಿಎಸ್ ಐ ಹನುಮಂತಪ್ಪ ಶಿರೆಹಳ್ಳಿ ಮಾದ್ಯಮಕ್ಕೆ ಮಾಹಿತಿ ನೀಡಿದ್ದಾರೆ. ನ್ಯಾಮತಿ ಪೋಲೀಸರ ಕಾರ್ಯವನ್ನು ಮೆಚ್ಚಿ ಎಸ್ಪಿ ಹನುಮಂತರಾಯ ಐಪಿಎಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ . ಕಾರ್ಯಚರಣೆಯಲ್ಲಿ ಎಎಸ್ ಐ ಎಂಜೆ ಚಂದ್ರು , ಸಿಬ್ಬಂದಿ ಆನಂದ . ರವಿನಾಯಕ, ಚಂದ್ರಶೇಖರ ದೊಡ್ಡಮನಿ .ಜಂಬೂರ ವಿಜಯ , ಮತ್ತು ತಿಮ್ಮರಾಜು  ಇದ್ದರು.


ಈ ಪ್ರಕರಣಕ್ಕೆ ಸಂಬಂದ ಪಟ್ಟಂತೆ ಗುರುರಾಜ ನಾಯ್ಕ ಸಂಬಂಧಿಯಲ್ಲಿ ಮೊಮ್ಮಗನಾಗಿದ್ದು ಯಶೋಧಬಾಯಿಯ ಚಿನ್ನದ ಮಾಂಗಲ್ಯಸರದ ಮೇಲೆ ಮೊದಲೇ ಕಣ್ಣಿಟ್ಟಿದ್ದನು . ಮೊಮ್ಮಗಳ ತೊಟ್ಟಿಲು ಕಾರ್ಯವನ್ನು ಮುಗಿಸಿ ಸ್ವಗ್ರಾಮಕ್ಕೆ ಬೈಕಿನಲ್ಲಿ ಹಿಂದಿರುವಾಗ ಗುರುರಾಜ ನಾಯ್ಕನು ತಾನು ಆಂದುಕೊಂಡ ಕೆಲಸ ಮುಗಿಸಲಿಕ್ಕೆ ಸ್ನೇಹಿತರ ಸಹಾಯವನ್ನು ಬೇಡಿದ್ದನು. ಸೋಮವಾರ ಚಿನ್ನಿಕಟ್ಟೆ ಕೆರೆಏರಿಯ ಮೇಲೆ ಇವನ ಸ್ನೇಹಿತರು ಅಡ್ಡಗಟ್ಟಿ ಚಿನ್ನದ ಮಾಂಗಲ್ಯ ಸರ ಹಾಗೂ ಕಿವಿಯ ಓಲೆಗಳು ಕೆನ್ಯೆಸರವನ್ನು ದೋಚಿರುತ್ತಾರೆ. ನ್ಯಾಮತಿ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಮಾನ್ಯ ಎಸ್ಪಿ ಹನುಮಂತರಾಯ ಐಪಿಎಸ್ ಮತ್ತು ನಮ್ಮಗಳ ಮಾರ್ಗದರ್ಶನದಂತೆ ಹೊನ್ನಾಳಿ ವೃತ್ತ ನಿರೀಕ್ಷಕರಾದ ದೇವರಾಜ್ ಹಾಗೂ ನ್ಯಾಮತಿ ಪಿಎಸ್ಐ ಹನುಮಂತಪ್ಪ  ಶಿರೆಹಳ್ಳಿ ಹಾಗೂ ಸಿಬ್ಬಂದಿಗಳು ತಕ್ಷಣವೇ ಕಾರ್ಯಪ್ರವೃತರಾಗಿ ಕೆಲವೇ ಗಂಟೆಗಳಲ್ಲಿ ಅರೋಪಿಗಳನ್ನು ಬಂದಿಸುವಲ್ಲಿ ನಮ್ಮ ಪೋಲೀಸರು ಯಶಸ್ವಿಯಾಗಿರುತ್ತಾರೆ  ಈ ಕಾರ್ಯಕ್ಕೆ ಎಸ್ಪಿ ಹನುಮಂತರಾಯ ಐಪಿಎಸ್ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ವರದಿ: ಕೋಗಲೂರು ಕುಮಾರ್


ಇತ್ತೀಚಿನ ಸುದ್ದಿ