ಅನಾರೋಗ್ಯದಿಂದ ಬಳಲುತ್ತಿದ್ದ ಕಾಂಗ್ರೆಸ್ ಹಿರಿಯ ಮುಖಂಡ ನಿಧನ - Mahanayaka

ಅನಾರೋಗ್ಯದಿಂದ ಬಳಲುತ್ತಿದ್ದ ಕಾಂಗ್ರೆಸ್ ಹಿರಿಯ ಮುಖಂಡ ನಿಧನ

27/10/2020

ದಾವಣಗೆರೆ: ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕಾಂಗ್ರೆಸ್ ನ ಹಿರಿಯ ಮುಖಂಡ, ಮಾಜಿ ಸಚಿವ ಡಾ.ವೈ.ನಾಗಪ್ಪ (88) ಅವರು ಇಂದು ಬೆಳಗ್ಗೆ ಹರಿಹರದ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ

ಇವರು ಹರಿಹರ ಕ್ಷೇತ್ರದಿಂದ 6 ಬಾರಿ ಚುನಾವಣೆಗೆ ಸ್ಪರ್ಧಿಸಿದ್ಧರು. 3 ಬಾರಿ ಹರಿಹರದ ಶಾಸಕರಾಗಿ ಆಯ್ಕೆಯಾಗಿದ್ದರು. 1974 ರಿಂದ 76, ಮೈಸೂರಿನಲ್ಲಿ ಎಂಡಿ ಅಧ್ಯಯನ ಮಾಡಿದ್ದರು.  1976ರಿಂದ 79, ದಾವಣಗೆರೆಯಲ್ಲಿ, 1979 ರಿಂದ 82ರವರೆಗೆ ಹರಿಹರದಲ್ಲಿ ಸರ್ಕಾರಿ ವೈದ್ಯರಾಗಿ ಸೇವೆ ಸಲ್ಲಿಸಿದ್ದರು.


1985ರಲ್ಲಿ ಮೊದಲಬಾರಿ ಕಾಂಗ್ರೆಸ್‌ ನಿಂದ ಚುನಾವಣೆಗೆ ಸ್ಪರ್ಧಿಸಿದ್ದರು. 1989, 1999, 2004ರ ಚುನಾವಣೆಯಲ್ಲಿ ಜಯಗಳಿಸಿದ್ದರು. ಸಮಾಜ ಕಲ್ಯಾಣ ಖಾತೆ ಸಚಿವರ ಸ್ಥಾನ ನಿಭಾಯಿಸಿದ್ದರು ಕೆಎಸ್‌ಎಸ್‌ಐಡಿಸಿ, ಎಸ್ಸಿ/ ಎಸ್ಟಿ ಬೋರ್ಡ್ ಛೇರ‍್ಮನ್‌ ಆಗಿ ಸೇವೆ ಸಲ್ಲಿಸಿದ್ದರು.


Provided by

ವರದಿ: ಕೋಗಲೂರು ಕುಮಾರ್ಇತ್ತೀಚಿನ ಸುದ್ದಿ