ಕಾಫಿನಾಡಲ್ಲಿ ಒಂದೇ ದಿನ ಹೃದಯಾಘಾತದಿಂದ ಇಬ್ಬರು ಸಾವು

ಚಿಕ್ಕಮಗಳೂರು : ಕಾಫಿನಾಡಲ್ಲಿ ಒಂದೇ ದಿನ ಹೃದಯಾಘಾತದಿಂದ ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೀನಾಕ್ಷಿ (27) ಹಾಗೂ 75 ವರ್ಷದ ಸುಮಿತ್ರೇಗೌಡ ಸಾವನ್ನಪ್ಪಿದವರಾಗಿದ್ದಾರೆ. ಮೀನಾಕ್ಷಿ ಮೂಡಿಗೆರೆ ತಾಲೂಕಿನ ಭಾರೀಬೈಲು ಗ್ರಾಮದ ಯುವತಿಯಾಗಿದ್ದಾರೆ. ಸುಮಿತ್ರೇಗೌಡ ಬಿ.ಹೊಸಳ್ಳಿ ಗ್ರಾಮದವರಾಗಿದ್ದಾರೆ.
27 ವರ್ಷದ ಮೀನಾಕ್ಷಿ ಹೃದಯಾಘಾತಕ್ಕೆ ಬಲಿ:
ಮೂಡಿಗೆರೆ ತಾಲೂಕಿನ ಭಾರೀಬೈಲು ಗ್ರಾಮದ ಯುವತಿ ಮೀನಾಕ್ಷಿ ನಿನ್ನೆ ಸಂಜೆ ಎದೆ ಉರಿಯ ಲಕ್ಷಣ ಕಂಡು ಬಂದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಮಳೆಯಿಂದಾಗಿ ರಸ್ತೆಗೆ ಮರ ಅಡ್ಡಲಾಗಿ ಬಿದ್ದ ಹಿನ್ನೆಲೆ ಆಸ್ಪತ್ರೆಗೆ ತಲುಪುವುದು ಅರ್ಧ ಗಂಟೆ ತಡವಾಗಿತ್ತು. ಹೀಗಾಗಿ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.
ಮೀನಾಕ್ಷಿಗೆ ಮೊನ್ನೆಯಿಂದಲೂ ಹುಷಾರಿರಲಿಲ್ಲ, ಸಣ್ಣದಾಗಿ ಜ್ವರ ಕಾಣಿಸಿಕೊಂಡಿತ್ತು, ಹೀಗಾಗಿ ಅವರನ್ನು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತೋರಿಸಲಾಗಿತ್ತು. ಈ ವೇಳೆ ಲೋ ಬಿಪಿಯಾಗಿದೆ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೇಳಿದ್ದರಂತೆ, ನಿನ್ನೆ ಅವರಿಗೆ ತೀವ್ರವಾಗಿ ಎದೆ ಉರಿ ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ತಲುಪುವಷ್ಟರಲ್ಲಿ ಅವರ ಪ್ರಾಣ ಹಾರಿ ಹೋಗಿದೆ.
ಸುಮಿತ್ರೇಗೌಡ ಹೃದಯಾಘಾತಕ್ಕೆ ಬಲಿ:
ಮೂಡಿಗೆರೆ ತಾಲೂಕಿನ ಬಿ.ಹೊಸಳ್ಳಿಯ ನಿವಾಸಿಯಾಗಿರುವ ಸುಮಿತ್ರೇಗೌಡ(75) ಅವರು ತಮ್ಮ ಮನೆಯಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನಲ್ಲಿ ಒಂದೇ ದಿನ ಇಬ್ಬರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: