ಮೂವರು ಮಕ್ಕಳೊಂದಿಗೆ ನದಿಗೆ ಹಾರಿ ತಾಯಿ ಆತ್ಮಹತ್ಯೆ - Mahanayaka
9:16 PM Wednesday 11 - September 2024

ಮೂವರು ಮಕ್ಕಳೊಂದಿಗೆ ನದಿಗೆ ಹಾರಿ ತಾಯಿ ಆತ್ಮಹತ್ಯೆ

14/11/2020

ಕುಶಾಲನಗರ: ಕೊಡಗಿನಲ್ಲೊಂದ ಹೃದಯ ವಿದ್ರಾವಕ ಘಟನೆ ನಡೆದಿದ್ದು, ಮೂವರು ಮಕ್ಕಳೊಂದಿಗೆ ತಾಯಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಹಿಳೆ ಈ ಕೃತ್ಯ ಎಸಗಿದೆ. ಚಿತ್ರದುರ್ಗ ಮೂಲದ ವಿನಯ್, ವಿಜಯ್ ಹಾಗೂ ದೀಕ್ಷಾ ಹಾಗೂ ಅವರ ತಾಯಿ ಚೆನ್ನಮ್ಮ(28) ಆತ್ಮಹತ್ಯೆಗೆ ಶರಣಾದವರು.

ಕೂಲಿ ಕೆಲಸಕ್ಕಾಗಿ ಚಿತ್ರದುರ್ಗದಿಂದ ಆಗಮಿಸಿದ್ದ ಇವರು ಗದ್ದೆಯಲ್ಲಿ ಶುಂಠಿ ಕಟಾವಿನ ಕೆಲಸದಲ್ಲಿ ತೊಡಗಿದ್ದರು. ಇಂದು ಬೆಳಗ್ಗೆ ಮಹಿಳೆ ನಾಲೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದೆ. ಈ ಸಂಬಂಧ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Provided by

ಇತ್ತೀಚಿನ ಸುದ್ದಿ